ಮಹಿಳೆಗೆ 2.80ಲಕ್ಷ ರೂ. ಆನ್‌ಲೈನ್‌ ವಂಚನೆ

Update: 2024-09-03 12:43 GMT

ಹಿರಿಯಡ್ಕ, ಸೆ.2: ಸೈಬರ್ ವಂಚಕರು ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೈತ್ರಾ(28) ಎಂಬವರಿಗೆ ಮೇ 4ರಂದು ಮೊಬೈಲ್‌ನಲ್ಲಿ ಕ್ರಿಪ್ರೋ ಕರೆನ್ಸಿ ಬಗ್ಗೆ ಮೇಸೆಜ್ ಮಾಡಿದ್ದು, ಮೆಸೇಜ್‌ನಲ್ಲಿ ವಿಡಿಯೋ ಡೌನ್ಲೋಡ್ ಮಾಡು ವಂತೆ ತಿಳಿಸಲಾಗಿತ್ತು. ಅದರಂತೆ ಚೈತ್ರಾ ಗೇಮ್ ಡೌನ್ಲೋಡ್ ಮಾಡಿದ್ದು ನಂತರ ಗೂಗಲ್ ಪೇ ಮುಖಾಂತಾರ ಒಟ್ಟು 2,80,000ರೂ. ಹಣವನ್ನು ಸೈಬರ್ ವಂಚಕರ ವಿವಿಧ ಖಾತೆಗೆ ಹಾಕಿದ್ದರು. ಆದರೆ ಅವರು ಹಣವನ್ನು ವಾಪಾಸ್ಸು ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News