ಜ.3: ವಿದ್ಯತ್ ಪೂರೈಕೆಯಲ್ಲಿ ಸ್ಥಗಿತ
ಮಂಗಳೂರು: ಜೆಪ್ಪು ಉಪಕೇಂದ್ರದಿಂದ ಹೊರಡುವ ಬಜಾಲ್ ಫೀಡರ್‌ನಲ್ಲಿ ಜ.3ರಂದು ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಫೀಡರ್‌ನಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕಾಮಗಾರಿ ನಡೆಯಲಿದೆ. ಹಾಗಾಗಿ ಬಜಾಲ್, ಬೊಲ್ಲ, ಬಜಾಲ್ ಚರ್ಚ್, ಪೆರ್ಜಿಲ, ಪ್ರಗತಿನಗರ, ಗಣೇಶನಗರ, ಸಾಲಿ ಯಾನ್ ರೈಸ್ ಮಿಲ್, ಆದಿಮಾಯೆ ಟೆಂಪಲ್, ತಂದೊಳಿಗೆ, ಸತ್ಯನಾರಾಯಣ ಭಜನಾ ಮಂದಿರ, ತೋಚಿಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
*ಕುಲಶೇಖರ ಉಪಕೇಂದ್ರದಿಂದ ಹೊರಡುವ ನಾಗುರಿ (ಎಕ್ಕೂರು) ಫೀಡರ್ ಮತ್ತು ಪಂಪ್‌ವೆಲ್ ಫೀಡರ್‌ನಲ್ಲಿ ಜ.3ರಂದು ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ಫೀಡರ್‌ಗಳಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಕಾಮಗಾರಿ ನಡೆಯಲಿದೆ. ಹಾಗಾಗಿ ಮರೋಳಿ, ಪಂಪ್‌ವೆಲ್, ಪಡೀಲ್, ಅಳಪೆ, ಮೇಘನಗರ, ನಾಗುರಿ, ನೇತ್ರಾವತಿ ಬಡಾವಣೆ, ಕಪಿತಾನಿಯೊ, ರೆಡ್‌ಬಿಲ್ಡಿಂಗ್, ರೈಲ್ವೇಸ್ಟೇಷನ್, ಕ್ವಾಡ್ ಸೆಂಟರ್, ಇಂಡಿಯಾನ ಹಾಸ್ಪಿಟಲ್, ನಿಟ್ಟೆ ಎಜುಕೇಷನ್, ಮಹಾವೀರ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.