ಡಾ. ತುಂಬೆ ಮೊಯ್ದಿನ್ ಅವರಿಗೆ ಬಂಟ್ವಾಳ ಜಮೀಯ್ಯತುಲ್ ಫಲಾಹ್ ನಿಂದ ಗೌರವಾರ್ಪಣೆ

Update: 2025-01-04 09:09 GMT

ಬಂಟ್ವಾಳ: ವಿದೇಶದ ನೆಲದಲ್ಲಿ ಶೈಕ್ಷಣಿಕ ಕ್ರಾಂತಿ ಮೂಡಿಸಿರುವ ಗಲ್ಫ್ ಮೆಡಿಕಲ್ ಕಾಲೇಜ್ ತುಂಬೆ ಯುನಿವರ್ಸಿಟಿಯ ಜನಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ತುಂಬೆ ಮೊಯ್ದಿನ್ ಅವರನ್ನು ಬಂಟ್ವಾಳ ಜಮೀಯ್ಯತುಲ್ ಫಲಾಹ್ ವತಿಯಿಂದ ಶನಿವಾರ ತುಂಬೆ ಹಿಲ್ಸ್ ನಲ್ಲಿ ಗೌರವಿಸಲಾಯಿತು.

ಬಂಟ್ವಾಳ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳ ಘಟಕದ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷರಾಗಿರುವ ಕೆ.ಕೆ. ಶಾಹುಲ್ ಹಮೀದ್ ಅಭಿನಂದನಾ ಮಾತುಗಳನ್ನಾಡಿದರು. ಈ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಹಾಗೂ ಯಾಸೀರ್ (ಕಲ್ಲಡ್ಕ ಮ್ಯೂಸಿಯಂ) ಅವರನ್ನು ಸನ್ಮಾನಿಸಲಾಯಿತು. ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್, ಸದಸ್ಯರಾದ ಮಹಮ್ಮದ್ ವಳವೂರು, ಆಶಿಕ್ ಕುಕ್ಕಾಜೆ, ಪುತ್ತುಬಾವ ಮಹಮೂದ್ ಹಾಜಿ ಉಪಸ್ಥಿತರಿದ್ದರು.


Delete Edit


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News