ಮಂಜನಾಡಿ: ಗ್ಯಾಸ್ ದುರಂತ ;ಸಂತ್ರಸ್ತರ ಮನೆಗೆ ಭೇಟಿ ನೀಡಿದ ಮಕ್ಕಳ ಸಾಹಿತ್ಯ ಪರಿಷತ್ತು ಉಳ್ಳಾಲ ಘಟಕದ ಪದಾಧಿಕಾರಿಗಳು
Update: 2025-01-06 07:47 GMT
ಉಳ್ಳಾಲ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಉಳ್ಳಾಲ ಘಟಕದ ಪದಾಧಿಕಾರಿಗಳು, ಸದಸ್ಯರು ಇತ್ತೀಚೆಗೆ ಮಂಜನಾಡಿಯ ಕಲ್ಕಟ್ಟದಲ್ಲಿ ಸಂಭವಿಸಿದ ಗ್ಯಾಸ್ ಸ್ಪೋಟ ದುರಂತದಲ್ಲಿ ಮರಣ ಹೊಂದಿದ ತಾಯಿ ಮತ್ತು ಮಕ್ಕಳ ಮನೆಗೆ ರವಿವಾರ ಭೇಟಿದರು.
ಈ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸಿಹಾನ ಬಿ.ಎಂ., ಉಪಾಧ್ಯಕ್ಷೆ ದಾಕ್ಷಾಯಿಣಿ, ಕಾರ್ಯದರ್ಶಿ ಹಾಗೂ ಉಳ್ಳಾಲ ನಗರಸಭೆಯ ಕೌನ್ಸಿಲರ್ ಜಬ್ಬಾರ್ ಯು.ಎಂ., ಸದಸ್ಯರಾದ ಶಶಿಕಲಾ ಗಟ್ಟಿ, ರಿಯಾಝ್ ಮಂಗಳೂರು, ಉಮೇಶ್ ತೊಕ್ಕೊಟ್ಟುಅವರು ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.