ಸಮಹಾದಿ: ರಿಫಾಯಿ ಯೂತ್ ಫೆಡರೇಷನ್ (RYF) ಸಮಿತಿ ರಚನೆ
ಪುತ್ತೂರು, ಜ. 05: ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಇದರ ಅಧೀನದಲ್ಲಿ ರಿಫಾಯಿ ಯೂತ್ ಫೆಡರೇಶನ್ ಸಮಹಾದಿ ಎಂಬ ನೂತನ ಯುವಕರ ಸಂಘಟನೆಯನ್ನು ರಚಿಸಲಾಯಿತು.
ಇದರ ರೂಪೀಕರಣ ಸಭೆಯು ಬೈತಡ್ಕ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಇದರ ಅಧ್ಯಕ್ಷರಾದ ಬಿ.ಪಿ ಇಸ್ಮಾಯಿಲ್ ಹಾಜಿಯವರ ಅಧ್ಯಕ್ಷತೆಯಲ್ಲಿ ಸಮಹಾದಿ ಮಸೀದಿಯಲ್ಲಿ ನಡೆಯಿತು.
ಮಸೀದಿ ಖತೀಬರಾದ ಬಹು| ರಫೀಕ್ ನಿಝಾಮಿ ಉಸ್ತಾದ್ ರು ಪ್ರಾಸ್ತಾವಿಕವಾಗಿ ಮಾತನಾಡಿ ದುವಾಃ ನೆರವೇರಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬೈತಡ್ಕ ಮಸೀದಿ ಅಧ್ಯಕ್ಷರಾದ ಬಿಪಿ ಇಸ್ಮಾಯಿಲ್ ಹಾಜಿಯವರು ಯುವಕರ ಸಂಘಟನೆಯ ಅವಶ್ಯಕತೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಸಿದರು.
ನಂತರ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆದು ಅಧ್ಯಕ್ಷರಾಗಿ ಮಹಮ್ಮದ್ ಬಶೀರ್ ರಾಗಿಪೇಟೆ, ಉಪಾಧ್ಯಕ್ಷರಾಗಿ ಸುಫೈಲ್ ಸಮಹಾದಿ ಹಾಗೂ ವಾಹಿದ್ ಅಲೆಕ್ಕಾಡಿ ,ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಸಮಹಾದಿ, ಜೊತೆ ಕಾರ್ಯದರ್ಶಿಯಾಗಿ ಫಾರೂಕ್ ರಾಗಿಪೇಟೆ ಹಾಗೂ ಹಾರಿಸ್ ಸಮಹಾದಿ ಹಾಗೂ ಕೋಶಾಧಿಕಾರಿಯಾಗಿ ಶಾಕಿರ್ ಸಮಹಾದಿ ಆಯ್ಕೆಯಾದರು. ಈ ವೇಳೆ 20 ಮಂದಿಯನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಇದರ ಅಧ್ಯಕ್ಷರಾದ ಸಾದಿಕ್ ಸಮಹಾದಿ, ಉಪಾಧ್ಯಕ್ಷ ಆದಂ ಸಮಹಾದಿ, ಪ್ರ.ಕಾರ್ಯದರ್ಶಿ ಫಲುಲ್ ರಾಗಿಪೇಟೆ, ಜೊತೆ ಕಾರ್ಯದರ್ಶಿ ಸಿನಾನ್, ಕೋಶಾಧಿಕಾರಿ ಉಮ್ಮರ್ ಫಾರೂಕ್ ರಾಗಿಪೇಟೆ, ಸಮಿತಿ ಸದಸ್ಯರಾದ ಸಿದ್ದೀಕ್ ಅಲೆಕ್ಕಾಡಿ, ಸಾಬುಕುಂಞಿ ಹುದೇರಿ,ಮಾಮು ಸಮಹಾದಿ ಹಾಗೂ ನುಸ್ರತುಲ್ ಇಸ್ಲಾಂ ಮದ್ರಸ ಸಮಹಾದಿ ಇದರ ಮಾಜಿ ಅಧ್ಯಕ್ಷರಾದ ಹಸನ್ ಕುಂಞಿ ಹಾಜಿ ಸಮಹಾದಿ ಸೇರಿದಂತೆ ಜಮಾಅತ್ ನ ಹಲವಾರು ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.