ಜ.4ರಿಂದ ಮಾಪಳಡ್ಕ ಮಖಾಂ ಉರೂಸ್, ಹಾಫಿಝ್ ಸನದುದಾನ ಸಮ್ಮೇಳನ

Update: 2024-12-29 14:32 GMT

ಸುಳ್ಯ: ತಾಲೂಕಿನ ಮಾಪಳಡ್ಕ ಮಖಾಂ ಶರೀಫ್‍ನಲ್ಲಿ  ವರ್ಷಂ ಪ್ರತಿ ನಡೆದುಕೊಂಡು ಬರುತ್ತಿರುವ ಮಾಪಳಡ್ಕ ಮಖಾಂ ಉರೂಸ್ ಹಾಗೂ ಮಾಪಳಡ್ಕ ದರ್ಸಿನಲ್ಲಿ ಕುರ್-ಆನ್ ಕಂಠಪಾಠ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಹಾಫಿಝ್ ಪದವಿ ಪ್ರದಾನ ಸಮ್ಮೇಳನವ ಜನವರಿ 4,5.6 ರಂದು ಜರುಗಲಿದೆ ಎಂದು ಮಾಪಳಡ್ಕ ದರ್ಗಾ ಶರೀಫ್ ಹಾಗೂ ಇರುವಂಬಳ್ಳ ಬದ್ರಿಯ್ಯಾ ಜಮಾಅತ್ ಕಮಿಟಿ ಅಧ್ಯಕ್ಷ ಎ.ಬಿ ಅಶ್ರಫ್ ಸಅದಿ ಹಾಗೂ ಮಾಪಳಡ್ಕ ಮುದರೀಸ್ ಹಾಫಿಝ್ ಅಬ್ದುಸ್ಸಲಾಂ ನಿಝಾಮಿ ತಿಳಿಸಿದ್ದಾರೆ.

ಸುಳ್ಯ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜನವರಿ 4 ಶನಿವಾರ ರಾತ್ರಿ 7 ಗಂಟೆಗೆ ಮೌಲಿದ್ ಪಾರಾಯಣ ಮತ್ತು 8 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಇರವಂಬಳ್ಳ ಬದ್ರಿಯಾ ಜಮಾಅತ್ ಕಮಿಟಿಯ ಗೌರವಾಧ್ಯಕ್ಷ ಸಂಕೇಶ್ ಇಬ್ರಾಹಿಂ ಹಾಜಿಯವರ ಅಧ್ಯಕ್ಷತೆಯಲ್ಲಿ ಅದೂರು ಸಯ್ಯದ್ ಪೂಕುಂಞಿ ತಂಙಳ್ ಅವರು ಪ್ರಾರ್ಥನೆ ನೆರವೇರಿಸಿ ಉದ್ಘಾಟಿಸಲಿದ್ದಾರೆ. ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಲಿದ್ದಾರೆ. ಜನವರಿ 5ರ ರಾತ್ರಿ 7 ಗಂಟೆಗೆ ದಿಕ್ರ್ ದುಆ ಸಂಗಮ ನಡೆಯಲಿದ್ದು ಅಸ್ಸಯ್ಯದ್ ಎನ್. ಪಿ. ಯಂ. ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದಾರೆ. ಇರುವಂಬಳ್ಳ ಬದ್ರಿಯ್ಯಾ ಜಮಾಅತ್ ಕಮಿಟಿಯ ಉಪಾಧ್ಯಕ್ಷ ಹಸೈನಾರ್ ದರ್ಮತನ್ನಿ ಅಧ್ಯಕ್ಷತೆಯಲ್ಲಿ ಮುನೀರ್ ಹುದವಿ ವಿಳಯಿಲ್ ಮುಖ್ಯ ಭಾಷಣ ನಡೆಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಯುವ ಉದ್ಯಮಿ ಅಬ್ದುಲ್ ರಹ್ಮಾನ್ ಸಂಕೇಶ್ ಆಗಮಿಸುವರು. ಜನವರಿ 6 ಸೋಮವಾರ ರಾತ್ರಿ 8 ಗಂಟೆಗೆ ಉರೂಸ್ ಸಮಾರೋಪ ಸಮಾರಂಭ ಹಾಗೂ ಹಾಫಿಝ್ ಬಿರುದು ದಾನ ಸಮ್ಮೇಳನ ನಡೆಯಲಿದ್ದು ಬದ್ರುಸ್ಸಾದಾತ್ ಸಯ್ಯದ್ ಇಬ್ರಾಹೀಂ ಖಲೀಲುಲ್ ಬುಖಾರಿ ಕಡಲುಂಡಿ ತಂಙಳ್ ಅವರು ನೇತೃತ್ವ ವಹಿಸಲಿದ್ದಾರೆ. ಜಮಾಅತ್ ಕಮಿಟಿ ಅಧ್ಯಕ್ಷ ಎ.ಬಿ ಅಶ್ರಫ್ ಸಅದಿಯವರ ಅಧ್ಯಕ್ಷತೆಯಲ್ಲಿ ಇಬ್ರಾಹೀಂ ಸಖಾಫಿ ತಾತೂರು ಮುಖ್ಯ ಪ್ರಭಾಷಣ ಮಾಡುವರು. ಉರೂಸ್ ಅಂಗವಾಗಿ ಧ್ವಜಾರೋಹಣ, ಮೌಲಿದ್ ಪಾರಾಯಣ, ಬುರ್ದಾ ಮಜ್ಲಿಸ್, ಖತಮುಲ್ ಕುರ್ ಆನ್ ಸಂಗಮ, ದಿಕ್ರ ದುಆ ಸಂಗಮ, ಮತ ಪ್ರವಚನ, ಹಾಫಿಝ್ ಬಿರುದು ದಾನ, ಉರೂಸ್ ದಿನಗಳಲ್ಲಿ ಅನ್ನದಾನ, ಉರೂಸ್ ತಬರ್ರುಕ್ ವಿತರಣೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಪಳಡ್ಕ ದರ್ಗಾ ಶರೀಫ್ ಹಾಗೂ ಇರುವಂಬಳ್ಳ ಬದ್ರಿಯ್ಯಾ ಜಮಾಅತ್ ಕಮಿಟಿಯ ಕೋಶಾಧಿಕಾರಿ ಹಸೈನಾರ್ ಐ.ಎಚ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News