ಜ.4ರಂದು ʼಬ್ಯುಸಿನೆಸ್ ಟಾನಿಕ್’ 300ನೇ ಸಂಚಿಕೆಯ ಕಾರ್ಯಕ್ರಮ
ಮಂಗಳೂರು: ‘ಬ್ಯುಸಿನೆಸ್ ಟಾನಿಕ್’ 300ನೇ ಸಂಚಿಕೆಯ ಕಾರ್ಯಕ್ರಮ ಹಾಗೂ ಕೋಸ್ಟಲ್ ಎಂಎಸ್‌ಎಂಇ ಸಮಿಟ್ ಜನವರಿ 4ರಂದು ಸೈಂಟ್ ಅಲೋಶಿಯಸ್ ಕಾಲೇಜಿನ ಫಾ.ಎಲ್.ಎಫ್. ರಸ್ಕಿನಾ ಸಭಾಭವನದಲ್ಲಿ ನಡೆಯಲಿದೆ.
ನಮ್ಮ ಕುಡ್ಲ 24*7 ಚಾನೆಲ್, ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ಕಾರ್ಯ ಕ್ರಮವನ್ನು ಹಮ್ಮಿಕೊಂಡಿದೆ. ಬೆಳಗ್ಗೆ 9:30ಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಕಾರ್ಯಕ್ರಮ ಉದ್ಘಾಟಿಸುವರು.
11:30ರಿಂದ ‘ಸ್ಟಾರ್ಟ್ ಅಪ್ ಟು ಸ್ಕೇಲ್ ಅಪ್’ ಗುಂಪು ಚರ್ಚೆ, ಕುಟುಂಬ ನಿರ್ವಹಣೆ,ವ್ಯವಹಾರದ ಭವಿಷ್ಯ, ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್, ತಜ್ಞರೊಂದಿಗೆ ಸಂವಹನ ನಡೆಯಲಿದೆ ಎಂದು ಲೆಕ್ಕಪರಿಶೋಧಕ ಎಸ್.ಎಸ್.ನಾಯಕ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಾಸುಕಿ ಕಶ್ಯಪ್, ಎ.ಪಿ.ಆಚಾರ್, ಮನೇಶ್ ಥಾಮಸ್, ಪ್ರತೀಕ್ಷಾ ಎಂ.ಪೈ, ಕೆ. ಉಲ್ಲಾಸ್ ಕಾಮತ್, ಅನಂತ್ ಪ್ರಭು, ಕ್ಯಾನಿ ಮೆಂಡೋನ್ಸಾ, ಆಂಡ್ರಿಯಾ ಗೊನ್ಸಾಲ್ವಿಸ್ ಕಿರಣ್ ಶೆಣೈ, ಶಿವಕುಮಾರ್ ಮುಗದ, ಸಂಕೇತ್ ಎಸ್. ನಾಯಕ್ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ನಮ್ಮ ಕುಡ್ಲದ ನಿರ್ದೇಶಕ ಹರೀಶ್ ಬಿ. ಕರ್ಕೇರ, ಸಂತ ಅಲೋಶಿಯೆಸ್ ಪರಿಗಣಿತ ವಿವಿ ರಿಜಿಸ್ಟ್ರಾರ್ ಡಾ.ರೊನಾಲ್ಡ್ ನಝರತ್, ಸಹಾಯಕ ಪ್ರಾಧ್ಯಾಪಕ ಅರ್ಜುನ್ ಪ್ರಕಾಶ್, ಕಾರ್ಯಕ್ರಮ ಸಂಯೋಜಕರಾದ ಎಂ.ಎನ್.ಪೈ, ರಮೇಶ್ಚಂದ್ರ ಪ್ರಭು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.