ಅಲ್ ಮದೀನ: ಫೆ. 2 ರಿಂದ ವಾರ್ಷಿಕ ಮಹಾ ಸಮ್ಮೇಳನ

Update: 2023-07-17 18:06 GMT

ಮಂಗಳೂರು: ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಗಳಲ್ಲಿ 30 ವರ್ಷಗಳನ್ನು ಪೂರೈಸುತ್ತಿರುವ ಮಂಜನಾಡಿ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಸಂಸ್ಥೆಯು ವಿವಿಧ ಜನಪರ ಯೋಜನೆಗಳು ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ "The 30 ಹೆಪ್ಪೆನ್ಸ್ Al Madeena Pearl Fêtes" ಎಂಬ ಶೀರ್ಷಿಕೆ ನಡೆಯಲಿದೆ.

'Knowledge Unites, Empathy Ignites' ಎಂಬ ಘೋಷವಾಕ್ಯದಡಿಯಲ್ಲಿ 2024ರ ಫೆಬ್ರವರಿ 2,3,4 ನೇ ದಿನಾಂಕಗಳಲ್ಲಿ 30 ನೇ ವಾರ್ಷಿಕೋತ್ಸವ ಮಹಾ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸಲಿದ್ದು ಇದರ ದಿನಾಂಕವನ್ನು ಅಲ್ ಮದೀನದ ಉಪಾಧ್ಯಕ್ಷರೂ ಆಗಿರುವ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಉಸ್ತಾದ್ ಅಧಿಕೃತವಾಗಿ ಇತ್ತೀಚೆಗೆ ಘೋಷಿಸಿದರು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News