ಸಮಸ್ತ ಪಬ್ಲಿಕ್ ಪರೀಕ್ಷೆ | ಕರಾಯ ಹಿದಾಯತುಲ್ ಇಸ್ಲಾಂ ಮದ್ರಸಕ್ಕೆ ಶೇ.100ರಷ್ಟು ಫಲಿತಾಂಶ

Update: 2024-03-26 17:10 GMT

ಉಪ್ಪಿನಂಗಡಿ: SKIMV BOARD ನಡೆಸಿದ ಸಮಸ್ತ ಪಬ್ಲಿಕ್ ಪರೀಕ್ಷೆಯಲ್ಲಿ ಬದ್ರಿಯಾ ಜುಮಾ ಮಸೀದಿ ಕರಾಯ, ಇದರ ಅಧೀನದಲ್ಲಿರುವ ಹಿದಾಯತುಲ್ ಇಸ್ಲಾಂ ಮದ್ರಸ ಕರಾಯ ನೂರು ಶೇಕಡಾ ಫಲಿತಾಂಶ ಪಡೆದಿದೆ.

ಐದನೇ ತರಗತಿಯಲ್ಲಿ 15 ಗಂಡು 11 ಹೆಣ್ಣು ಮಕ್ಕಳು, ಏಳನೇ ತರಗತಿಯಲ್ಲಿ 5 ಗಂಡು 3 ಹೆಣ್ಣು ಮಕ್ಕಳು ಹಾಗೂ 10 ನೇ ತರಗತಿಯಲ್ಲಿ 3 ಗಂಡು 9 ಹೆಣ್ಣು ಮಕ್ಕಳು ಪರೀಕ್ಷೆ ಬರೆದಿದ್ದರು.

ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು, ತರಗತಿ ಉಸ್ತಾದರುಗಳು ಹಾಗೂ ಪ್ರೋತ್ಸಾಹ ನೀಡಿ ಸಹಕರಿಸಿದ ಪೋಷಕರು ಮತ್ತು ಉಸ್ತುವಾರಿ ಸಮಿತಿ ಸದಸ್ಯರಿಗೆ ಜಮಾಅತ್ ಆಡಳಿತ ಸಮಿತಿ ಅಭಿನಂದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News