ಆರಂಗಡಿ: ಹದಗೆಟ್ಟ ರಸ್ತೆ; ದುರಸ್ತಿಗೆ ಒತ್ತಾಯಿಸಿ ಮನವಿ
Update: 2024-11-06 18:33 GMT
ಮಂಜನಾಡಿ: ಗ್ರಾಮ ಪಂಚಾಯತ್ ವ್ಯಾಪ್ತಿಯ 11ನೇ ವಾರ್ಡಿನ ಆರಂಗಡಿ ಬಸ್ಸು ನಿಲ್ದಾಣ ಬಳಿಯ ಮುಖ್ಯ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೊಡಕುಂಟು ಮಾಡುತ್ತಿದೆ. ಇದರ ದುರಸ್ತಿಗೆ ಒತ್ತಾಯಿಸಿ DYFI ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ರಸ್ತೆಯ ಮುಖಾಂತರ ಪ್ರದೇಶದ ಜನರು ನಾನಾ ಭಾಗಗಳಿಗೆ ಸಂಚರಿಸುತ್ತಿದ್ದು ಸದ್ಯ ಸಮಸ್ಯೆಗಳನ್ನು ಎದುರಿಸುತ್ತಿ ದ್ದಾರೆ. ರಸ್ತೆಯು ಹದಗೆಟ್ಟಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ಈ ರಸ್ತೆಯನ್ನು ಕೂಡಲೇ ದುರಸ್ಥಿಗೊಳಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಮುಂಭಾಗ ಡಿವೈಎಫ್ಐ ಪ್ರತಿಭಟನೆ ನಡೆಸಲಿದೆ ಎಂದು ಮಂಜನಾಡಿ ಗ್ರಾಮ ಪಂಚಾಯತ್‌ಗೆ ಮನವಿ ನೀಡಲಾಗಿದೆ.
ಈ ಸಂದರ್ಭ ನಿಯೋಗದಲ್ಲಿ DYFI ಉಳ್ಳಾಲ ತಾಲೂಕು ಉಪಾಧ್ಯಕ್ಷರಾದ ರಝಾಕ್ ಮುಡಿಪು, ಮುಖಂಡರಾದ ರಝಾಕ್ ಮೊಂಟೆಪದವು ಮತ್ತು ಸಿರಾಜ್ BM ಜೊತೆಗಿದ್ದರು.