ಫಾದರ್ ಮುಲ್ಲರ್ ಆಸ್ಪತ್ರೆಗೆ ಜೆಸಿಐ ಪ್ರೈಮ್ ಪ್ರಮಾಣಪತ್ರ
ಮಂಗಳೂರು: ಅಭಿದಮನಿ (ಇಂಟ್ರಾವೆನಸ್) ಚಿಕಿತ್ಸೆಯ ಸೋಂಕುಗಳ ಅಪಾಯಗಳು ಮತ್ತು ಔಷಧಿ ದೋಷಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ವಿಚಾರದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ (ಎಫ್‌ಎಂಎಂಸಿಎಚ್) ಜಂಟಿ ಕಮಿಷನ್ ಇಂಟರ್‌ನ್ಯಾಶನಲ್ (ಜೆಸಿಐ) ಪ್ರೈಮ್ ಪ್ರಮಾಣಪತ್ರ ಪಡೆದಿದೆ.
ಈ ಪ್ರಮಾಣಪತ್ರವನ್ನು ಗಳಿಸಿದ ಭಾರತದ 16 ಆಸ್ಪತ್ರೆಗಳಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಒಂದಾಗಿದೆ.
ಆಸ್ಪತ್ರೆಯ ದಶಮಾನೋತ್ಸವ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪರವಾಗಿ ಡಾ. ವಿಜಯ್ ಸುಂದರಸಿಂಗ್, ಆಡಳಿತಾಧಿಕಾರಿ ಫಾದರ್ ಜಾರ್ಜ್ ಜೀವನ್ ಸಿಕ್ವೇರಾ ಅವರೊಂದಿಗೆ ಪ್ರಮಾಣಪತ್ರವನ್ನು ಸ್ವೀಕರಿಸಿದರು.
ಬಿಡಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಹಿರಿಯ ವ್ಯವಸ್ಥಾಪಕ ರೋಹಿತ್ ಅಬ್ರೋಲ್, ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ಫಾದರ್ ರಿಚರ್ಡ್ ಅಲೋಶಿಯಸ್ ಕೊಯೆಲ್ಹೋ ಆಸ್ಪತ್ರೆಯ ಸೋಂಕು ನಿಯಂತ್ರಣ ವಿಭಾಗದ ಅಧಿಕಾರಿ ಡಾ ಥಾಮಸ್ ಎಸ್‌ಕೆ, ಆಡಳಿತಾಧಿಕಾರಿಗಳಾದ ಫಾ.ಅಜಿತ್ ಮಿನೆಜಸ್, ಫ್ರಾ ನೆಲ್ಸನ್ ಡಿ ಪಾಯ್ಸ್, ಮುಖ್ಯ ಶುಶ್ರೂಷಕ ಅಧಿಕಾರಿ ಸಿಸ್ಟರ್ ನ್ಯಾನ್ಸಿ ಪ್ರಿಯಾ, ವೈದ್ಯಕೀಯ ಅಧೀಕ್ಷಕ ಡಾ.ಉದಯ್ ಕುಮಾರ್ ಮತ್ತು ಆಸ್ಪತ್ರೆಯ ಸೋಂಕು ನಿಯಂತ್ರಣ ಸಮಿತಿಯ ಅಧ್ಯಕ್ಷರು ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕ ಡಾ.ಬಿ.ರೇಖಾ, ಎಚ್‌ಐಸಿ ನರ್ಸ್ ರೆನಿಟಾ ನೊರೊನ್ಹಾ, ಉಪಸ್ಥಿತರಿದ್ದರು.