ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ

Update: 2023-10-04 07:17 GMT

ಬಜ್ಪೆ, ಅ.4: ಬಜ್ಪೆಯ ಅಭಿವೃದ್ಧಿ ಮತ್ತು ಪಟ್ಟಣ ಪಂಚಾಯತ್ ಮತ್ತು ಸರಕಾರದ ವಿವಿಧ ಇಲಾಖೆಯಲ್ಲಿ ನಾಗರಿಕರಿಗೆ ಆಗುತ್ತಿರುವ ಅನಾನುಕೂಲತೆಗಳನ್ನು ಪ್ರಾಮಾಣಿ ಕತೆಯಿಂದ ನಿವಾರಿಸುವ ಸಲುವಾಗಿ ನೂತನವಾಗಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗಿದೆ.

ಮಂಗಳವಾರ ಬಜ್ಪೆ ಅನ್ಸಾರ್ ಶಾಲೆಯ ಬಳಿಯ ಖಾಸಗಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಯಿತು.

ಬಜ್ಪೆಯ ಸಮಾನ ಮನಸ್ಕ ನಾಗರಿಕರು, ವಿವಿಧ ಸಂಘ ಸಂಸ್ಥೆಯ ಮುಖಂಡರು ಮತ್ತು ರಾಜಕೀಯ ಪಕ್ಷದ ಧುರೀಣರ ನೇತೃತ್ವದಲ್ಲಿ ಪಕ್ಷಾತೀತ, ರಾಜಕೀಯ ರಹಿತವಾಗಿ ಬಜ್ಪೆ ನಾಗರಿಕರ ಹಿತರಕ್ಷಣೆ ಮಾಡಲಿದೆ ಎಂದು ಸಂಘಟನೆ ತಿಳಿಸಿದೆ.

ವೇದಿಕೆಯ ಸಂಚಾಲಕರಾಗಿ ಸಿರಾಜ್ ಹುಸೈನ್ ಬಜ್ಪೆ ಹಾಗೂ ಸಹ ಸಂಚಾಲಕರಾಗಿ ಇಂಜಿನಿಯರ್ ಇಸ್ಮಾಯಿಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ಸಂಘಟನೆಯ ಮುಖಾಂತರ ಬಜ್ಪೆ ನಾಗರಿಕರ ಹಿತ ಕಾಪಾಡುವ ಕೆಲಸವನ್ನು ಸಂಘಟನೆ ಪ್ರಾಮಾಣಿಕವಾಗಿ ಮಾಡಲಿದೆ ಎಂದು ಸಂಘಟನೆಯ ಸಂಚಾಲಕ ಸಿರಾಜ್ ಹುಸೈನ್ ಬಜ್ಪೆ ಭರವಸೆ ನೀಡಿದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News