ಬಜ್ಪೆ: ಮನೆಗೆ ನುಗ್ಗಿ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Update: 2023-09-30 15:14 GMT

ಬಜ್ಪೆ, ಸೆ.30: ಎರಡು ಪ್ರತ್ಯೇಕ ಮನೆ ಕಳವು ಪ್ರಕರಣದ ಇಬ್ಬರನ್ನು ಬಜ್ಪೆ ಪೊಲೀಸರು ಬಂಧಿಸಿ 5ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.

ಸುರತ್ಕಲ್‌ ಚೊಕ್ಕವಟ್ಟು ನಿವಾಸಿ ತೌಸೀಫ್‌ ಅಹಮ್ಮದ್ (34), ಕಸಬಾ ಬೆಂಗ್ರೆಯ ನಿವಾಸಿ ಫರಾಜ್ (27) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.

ಬಂಧಿತರಿಂದ 41 ಲಕ್ಷ ರೂ. ಮೌಲ್ಯದ ಒಟ್ಟು 75 ಗ್ರಾಂ ತೂಕದ ಚಿನ್ನಾಭರಣಗಳು, ಕಳವು ಮಾಡಲು ಉಪಯೋಗಿಸಿದ್ದ 50 ಸಾವಿರ ರೂ. ಮೌಲ್ಯದ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.

ಪಣಂಬೂರು ಗ್ರಾಮದ ಕುದುರೆಮುಖ ಜಂಕ್ಷನ್‌ ಬಸ್ಸು ನಿಲ್ದಾಣದ ಬಳಿ ಅನುಮಾನ್ಪದವಾಗಿ ಇರುವುದನ್ನು ಕಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 2021ರ ಮಾರ್ಚ್‌ನಲ್ಲಿ ಮಂಗಳೂರು ತಾಲೂಕಿನ ಬಡಗುಳಿವಾಡಿ ಗ್ರಾಮದ ಮನಲಪದವು ರಸ್ತೆಯ ಬದಿಯಲ್ಲಿರುವ ಸದಾಶಿವ ಸಾವಂತ ಎಂಬವರ ಮನೆಯ ಬೀಗ ಮುರಿದು ಮನೆಗಳಿಂದ ಕಳವು ಮಾಡಿರುವ ಕುರಿತು ಮತ್ತು 2023ರ ನವೆಂಬರ್‌ ನಲ್ಲಿ ಮಂಗಳೂರು ತಾಲೂಕು ಅದ್ದೂರು ಗ್ರಾಮದ ಪುಣಿ ಜೋಡಿಯ ರಸ್ತೆಯ ಬದಿಯಲ್ಲಿರುವ ಸದಾಶಿವ ಪೂಜಾರಿ ಎಂಬವರ ಮನೆಯ ಬೀಗ ಮುರಿದು ಕಳವುಗೈದಿರುವ ಕುರಿತು ತಪ್ಪೊಪ್ಪೊಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ ಆರೋಪಿಗಳ ವಿರುದ್ಧ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರ ವಿರುದ್ಧ ಮಂಗಳೂರು ನಗರ ಪಣಂಬೂರು ಪೊಲೀಸ್ ಠಾಣೆ, ಮಂಗಳೂರು ನಗರ ಉತ್ತರ ಪೊಲೀಸ್ ಠಾಣೆ, ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆ, ಬಂಟ್ವಾಳ ನಗರ ಪೊಲೀಸ್‌ ಠಾಣೆ, ಮತ್ತು ಉಡುಪಿ ನಗರ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News