ಬಂಟ್ವಾಳ : ಯು.ಟಿ.ಖಾದರ್ ಅಭಿಮಾನಿ ಬಳಗ ವತಿಯಿಂದ ಹುಟ್ಟು ಹಬ್ಬ ಆಚರಣೆ
ಬಂಟ್ವಾಳ : ಪುದು- ಫರಂಗಿಪೇಟೆಯ ಯು.ಟಿ.ಖಾದರ್ ಅಭಿಮಾನಿ ಬಳಗ ಇದರ ವತಿಯಿಂದ ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ರವರ 54 ನೇ ಹುಟ್ಟು ಹಬ್ಬವನ್ನು ಮೇರೆಮಜಲು ಲೋಕೇಶ್ ಪೆರ್ಗಡೆ ಫೌಂಡೇಶನ್ ಟ್ರಸ್ಟ್ ನವರ ಶ್ರೀ ಮಾತ ಲಕ್ಷ್ಮಣಿ ಶಾಂತಿ ಧಾಮ ಆಶ್ರಮದಲ್ಲಿ ಆಶ್ರಮವಾಸಿಗಳ ಜೊತೆ ಸಂಭ್ರಮಿಸಿದರು.
ಕೆ.ಪಿ.ಸಿ.ಸಿ.ಸದಸ್ಯ, ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ ಮಾತನಾಡಿ, ಯು.ಟಿ.ಖಾದರ್ ಅವರ 54 ನೇ ವರ್ಷದ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಆಶ್ರಮದಲ್ಲಿ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಿರುವುದು ಮಾದರಿ ಕಾರ್ಯಕ್ರಮವಾಗಿದ್ದು ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ. ಸರ್ವ ಧರ್ಮದ ಜನರ ಜೊತೆ ಬೆರೆಯುವ ಖಾದರ್ ಅವರ ಹುಟ್ಟು ಹಬ್ಬವನ್ನು ಅವರ ಇಷ್ಟದಂತೆ ಆಶ್ರಮದ ನಿರ್ಗತಿಕರ ಜೊತೆಗೆ ವೈಶಿಷ್ಟ್ಯ ಪೂರ್ಣವಾಗಿ ಮಾಡಿದ್ದೇವೆ ಎಂಬ ಸಂತಸವಿದೆ ಎಂದ ಅವರು ಮುಂದಿನ ದಿನಗಳಲ್ಲಿ ಖಾದರ್ ಅವರಿಗೆ ಭಗವಂತ ಆರೋಗ್ಯ, ಆಯುಷ್ಯ ಕೊಡಲಿ ಹಾಗೂ ಉನ್ನತ ಮಟ್ಟದ ಸ್ಥಾನಕ್ಕೆ ಏರಲಿ ಎಂದು ಅವರು ಶುಭ ಹಾರೈಸಿದರು.
ಪುದು ಗ್ರಾ.ಪಂ.ಮಾಜಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ, ಬಡವರ ಮತ್ತು ಎಲ್ಲಾ ವರ್ಗದವರ ಸೇವೆ ಮಾಡಲು ಖಾದರ್ ಅವರಿಗೆ ದೇವರು ಶಕ್ತಿ ನೀಡಲಿ ಎಂದು ಹಾರೈಸಿದರು.
ಇದೇ ವೇಳೆ ಯುಟಿಕೆ ಅಭಿಮಾನಿಗಳು ಆಶ್ರಮವಾಸಿಗಳಿಗೆ ಮಧ್ಯಾಹ್ನ ದ ಭೋಜನದ ವ್ಯವಸ್ಥೆ ಮಾಡಿದರು. ಜೊತೆಗೆ ಒಂದು ಕಿಂಟ್ವಾಲ್ ಅಕ್ಕಿಯನ್ನು ಆಶ್ರಮಕ್ಕೆ ನೀಡಿದರು.
ಮೇರಮಜಲು ಗ್ರಾ.ಪಂ.ಸದಸ್ಯೆ ವೃಂದಾ ಪೂಜಾರಿ, ಪುದು ಉಪಾಧ್ಯಕ್ಷ ಇಕ್ಬಾಲ್ ಸುಜೀರು, ಸದಸ್ಯರಾದ ರಿಯಾಜ್ ಕುಂಪಣಮಜಲು, ಮಹಮ್ಮದ್ ಇಶಾಮ್, ಮಹಮ್ಮದ್ ಮೋನು, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ಅಹಮದ್ ಇರ್ಶಾದ್, ಮುಡಿಪು ಬ್ಲಾಕ್ ಉಪಾಧ್ಯಕ್ಷ ಮಜೀದ್ ಪೆರಿಮಾರ್, ಫೌಂಡೇಶನ್ ನ ಅಧ್ಯಕ್ಷ ಹರೀಶ್ ಪೆರ್ಗಡೆ, ಪ್ರಮುಖರಾದ ರಫೀಕ್ ಪೆರಿಮಾರ್, ಝಾಹೀರ್ ಕುಂಪಣಮಜಲು, ಮಲಿಕ್ ಕುಂಪಣಮಜಲು, ಮುಬಾರಕ್, ಆಶೀಫ್ ಮಾರಿಪಲ್ಲ, ಗಣೇಶ್ ಮೇರೆಮಜಲು, ಸಿರಾಜ್ ಮಾರಿಪಲ್ಲ, ಇರ್ಶಾದ್ ಸುಜೀರು ಡಿ.ಸಿ.ಸಿ.ಸದಸ್ಯೆ ಲೂಯಿಸಾ ಮೊಂತೆರೋ, ಮೇರೆಮಜಲು, ತನ್ಸೀಫ್ ಮಾರಿಪಲ್ಲ ಮತ್ತಿತರರು ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.