ಬಂಟ್ವಾಳ : ಕಾರು - ರಿಕ್ಷಾ ಢಿಕ್ಕಿ; ಮಹಿಳೆಗೆ ಗಾಯ
Update: 2023-08-26 16:59 GMT
ಬಂಟ್ವಾಳ : ಕಾರು ಮತ್ತು ರಿಕ್ಷಾ ನಡುವೆ ಪರಸ್ಪರ ಢಿಕ್ಕಿ ಹೊಡೆದು ಓರ್ವ ಮಹಿಳಾ ಪ್ರಯಾಣಿಕೆ ಗಂಭೀರವಾಗಿ ಗಾಯಗೊಂಡ ಘಟನೆ ಸಜಿಪ ಸಮೀಪದ ಕೋಟೆಕಣಿ ಎಂಬಲ್ಲಿ ನಡೆದಿದೆ.
ಅಪಘಾತದಿಂದ ಕಂಚಿನಡ್ಕ ಪದವು ನಿವಾಸಿ ಅಸಿಯಮ್ಮ ಎಂಬವರು ಗಂಭೀರ ಗಾಯಗೊಂಡಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಳಿದಂತೆ ಇವರ ಮನೆಯವರಾದ ಶಹಿನಾದ್ , ಅಲ್ತಾಫ್ ಮತ್ತು ರಿಕ್ಷಾ ಚಾಲಕ ಶಹೀದ್ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.
ಸಾಲೆತ್ತೂರಿನಿಂದ ರಿಕ್ಷಾದಲ್ಲಿ ಕೋಟೆಕಣಿಯ ಸಂಬಂಧಿಕರ ಮನೆಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು ಆಟೋ ರಿಕ್ಷಾ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.