ಬಂಟ್ವಾಳ: ಬಡಗಬೆಳ್ಳೂರು ಅನುದಾನಿತ ಶಾಲೆಯ ಐವರು ಗೌರವ ಶಿಕ್ಷಕರಿಗೆ ಹೆಚ್ಚುವರಿ ವೇತನ ಹಸ್ತಾಂತರ

Update: 2023-09-04 11:17 GMT

ಬಂಟ್ವಾಳ: ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಐವರು ಗೌರವ ಶಿಕ್ಷಕರಿಗೆ ಹೆಚ್ಚುವರಿ ವೇತನದ ಮೊತ್ತವನ್ನು ಇಂದು ಹಳೆ ಸಂಘವು ಹಸ್ತಾಂತರಿಸಿತು.

ಪ್ರಸ್ತುತ ಶಾಲೆಯಲ್ಲಿ 109 ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದು, ಸರಕಾರದ ವತಿಯಿಂದ ಓರ್ವ ಶಿಕ್ಷಕ ಕರ್ತವ್ಯ ನಿರ್ವಹಿಸುತ್ತಿದ್ದರೆ, ವಿದ್ಯಾರ್ಥಿಗಳಿಗೆ ಜ್ಞಾನ ಕೊರತೆಯಾಗಬಾರದು ಎಂಬ ಮಹತ್ವಕಾಂಕ್ಷೆಯೊಂದಿಗೆ ಊರಿನವರ ಶಾಲಾಭಿವೃದ್ಧಿ ಸಮಿತಿಯ ಮೂಲಕ ಕಳೆದ ಒಂದು ದಶಕದಿಂದ ನಾಲ್ವರು ಗೌರವ ಶಿಕ್ಷಕರನ್ನು ನೇಮಿಸಿ, ಅವರಿಗೆ ವೇತನ ವನ್ನು ಊರ ಹಾಗೂ ಪರವೂರಿನ ದಾನಿಗಳ ಸಹಾಯದಿಂದ ನೀಡಲಾಗುತ್ತಿದೆ. ಅವರಿಗೆ ಕನಿಷ್ಠ ವೇತನ ನೀಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ವೇತನ ನೀಡಬೇಕು ಎಂಬ ಉದ್ದೇಶದಿಂದ ಹೆಚ್ಚುವರಿ ವೇತನದ ಜವಾಬ್ದಾರಿಯನ್ನು ಹಳೆ ವಿದ್ಯಾರ್ಥಿ ಸಂಘವು ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳ ಬ್ಯಾಕ್ ಲಾಗ್ ವೇತನದ ಚೆಕ್ ಅನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಗುಂಡಾಲ, ಹಿರಿಯರಾದ ರಮೇಶಚಂದ್ರ ಭಂಡಾರಿ, ಸಂಚಾಲಕರಾದ ನರೇಂದ್ರನಾಥ ಭಂಡಾರಿ, ಸಚೀಂದ್ರನಾಥ ರೈ, ರವೀಂದ್ರ ಮೇಲಾಂಟ, ಗಣೇಶ ಭಂಡಾರಿ ನಲಿಮಾರ್, ಗುಣಪಾಲ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಕೇಶವ ನಾಯ್ಕ್, ನಿವೃತ್ತ ಶಿಕ್ಷಕರಾದ ಸಂಕಪ್ಪ ಶೆಟ್ಟಿ, ಗಂಗಾಧರ ರೈ ಉಪಸ್ಥಿತರಿದ್ದರು.




















 


 


 


 


 


 


 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News