ಬಂಟ್ವಾಳ : ಹೃದಯಾಘಾತದಿಂದ ವ್ಯಕ್ತಿ ನಿಧನ
Update: 2023-09-16 17:26 GMT
ಬಂಟ್ವಾಳ : ಮೂಲತಃ ಬೊಳ್ಳಾಯಿ ನಿವಾಸಿ ಕಲ್ಲಡ್ಕದಲ್ಲಿ ವಾಸ್ತವ್ಯವಿರುವ ಅಬ್ದುಲ್ ಲತೀಫ್ (48) ಹೃದಯಾಘಾತದಿಂದ ಶುಕ್ರವಾರ ರಾತ್ರಿ ನಿಧನರಾದರು.
ಹಲವು ವರ್ಷಗಳಿಂದ ವಿದೇಶದಲ್ಲಿ ವೃತ್ತಿಯಲ್ಲಿದ್ದ ಅವರು ಮೂರು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಆರೋಗ್ಯ ಅಷ್ಟೇನೂ ಚೆನ್ನಾಗಿರಲಿಲ್ಲದ ಕಾರಣ ಕಲ್ಲಡ್ಕದಲ್ಲಿ ಹಸಿ ಮೀನು ವ್ಯಾಪಾರ ನಡೆಸುತ್ತಿದ್ದರು. ಶುಕ್ರವಾರ ರಾತ್ರಿ ಹೃದಯಾಘಾತ ದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಸಂಖ್ಯೆಯ ಬಂಧುಗಳನ್ನು ಅಗಲಿದ್ದಾರೆ.