ಬಂಟ್ವಾಳ: ದ್ವಿಚಕ್ರ ವಾಹನದಲ್ಲಿ ಇರಿಸಲಾಗಿದ್ದ ಒಂದು ಲಕ್ಷ ರೂ.ನಗದು ಕಳವು; ದೂರು ದಾಖಲು

Update: 2023-10-07 10:12 GMT

ಬಂಟ್ವಾಳ: ದ್ವಿಚಕ್ರ ವಾಹನದಲ್ಲಿ ಇರಿಸಲಾಗಿದ್ದ ಒಂದು ಲಕ್ಷ ರೂ.ನಗದು ಕಳವಾಗಿರುವ ಘಟನೆ ಬಿಸಿರೋಡಿನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಶುಕ್ರವಾರ ಬೆಳಿಗ್ಗೆ ನರಿಕೊಂಬು ನಿವಾಸಿ ಪ್ರಕಾಶ್ ಕೋಡಿಮಜಲು ಎಂಬವರು ಬ್ಯಾಂಕಿನಿಂದ ಡ್ರಾ ಮಾಡಿದ್ದ 1.40 ಲಕ್ಷ ಹಣವನ್ನು ದ್ವಿಚಕ್ರವಾಹನದ ಸೀಟಿನಡಿ ಇರುವ ಬಾಕ್ಸ್ ನಲ್ಲಿ ಇರಿಸಿದ್ದರು. ಬಿ.ಸಿರೋಡಿನ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಗಾಡಿ ನಿಲ್ಲಿಸಿ ಬೇರೆ ಕೆಲಸ ನಿಮಿತ್ತ ತೆರಳಿದ್ದರು. ಮಧ್ಯಾಹ್ನ ಬಳಿಕ ಬಂದು ಸೀಟು ಲಾಕ್ ತೆರೆದಾಗ ಅದರೊಳಗೆ ಇರಿಸಲಾಗಿದ್ದ 1.40 ಲಕ್ಷದಲ್ಲಿ 40 ಸಾವಿರ ಮಾತ್ರ ಇತ್ತು ಎಂದು ತಿಳಿದು ಬಂದಿದೆ.

ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದು, ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News