ಬಂಟ್ವಾಳ : ಡೆಂಗ್ ಜ್ವರಕ್ಕೆ ಯುವತಿ ಬಲಿ
Update: 2023-09-12 17:23 GMT
ಬಂಟ್ವಾಳ: ವಿಟ್ಲದ ಪೆರುವಾಯಿಯಲ್ಲಿ ಯುವತಿಯೊಬ್ಬಳು ಡೆಂಗ್ ಜ್ವರದಿಂದ ಮೃತಪಟ್ಟ ಘಟನೆ ನಡೆದಿದೆ.
ಪೆರುವಾಯಿ ನಿವಾಸಿ ಆಶಾ (25) ಮೃತಪಟ್ಟ ಯುವತಿ.
ಕಳೆದ ಎರಡು ದಿನಗಳಿಂದ ಡೆಂಗ್ ಜ್ವರದಿಂದ ಬಳಲುತ್ತಿದ್ದ ಆಕೆಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯುವತಿ ಇಂದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.