ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮ ಗಾಂಧೀಜಿ, ಶಾಸ್ತ್ರಿ ಜನ್ಮದಿನಾಚರಣೆ
ಕಾರ್ಕಳ : ಬ್ಲಾಕ್ ಕಾಂಗ್ರೆಸ್ ಕಾರ್ಕಳ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂದೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತೀ ಜನ್ಮ ದಿನಾಚರಣೆಯನ್ನು ಕಾಂಗ್ರೆಸ್ ಕಚೇರಿಯಲ್ಲಿ ಆರಿಸಲಾಯಿತು.
ಈ ಸಂದರ್ಭ ಕಾಂಗ್ರೆಸ್ ಮುಂಖಡ ಉದಯ್ ಶೆಟ್ಟಿ ಮಾತನಾಡಿ ಪ್ರಪಂಚದಲ್ಲಿಯೇ ಶಸ್ತ್ರರಹಿತ ಹೋರಾಟದ ಮೂಲಕ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಾಹತ್ಮಾ ಗಾಂದೀಜಿಯವರ ಜೀವನ ಸಾರ್ವಕಾಲಿಕ ಅನುಕರಣೀಯ, ಅಹಿಂಸೆ, ತ್ಯಾಗ ಮತ್ತು ಉಪವಾಸ ಸತ್ಯಾಗ್ರಹದ ಮೂಲಕ ಅವರು ನೀಡಿದ ಸಂದೇಶಗಳನ್ನು ವಿಶ್ವದ ಎಲ್ಲಾ ನಾಯಕರು ಒಪ್ಪಿಕೊಂಡಿದ್ದಾರೆ ಅಂತಹ ಮಹಾನ್ ವ್ಯಕ್ತಿತ್ವ ಗಾಂದೀಜಿಯವರದ್ದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕರಾದ ಸದಾಶಿವ ದೇವಾಡಿಗ ಮಾತನಾಡಿ ಜೈ ಜವಾನ್ ಜೈ ಕಿಸಾನ್ ಘೋಷಣೆಯ ಮೂಲಕ ಶಾಸ್ತ್ರೀಯವರು ದೇಶದಲ್ಲಿ ಕ್ರಾಂತಿಯನ್ನೇ ಮಾಡಿದರು ಇದರ ಪರಿಣಾಮವಾಗಿಯೇ ಅಹಾರ ಉತ್ಪಾದನೆ ಹೆಚ್ಚಾಗಿ ಅಭಿವೃದ್ಧಿಗೆ ಸಹಕಾರಿಯಾಯಿತು ಮತ್ತು ಅವರ ಸರಳ ಜೀವನ ಎಲ್ಲರಿಗೂ ಆದರ್ಶ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಾರ್ಜ್ ಕ್ಯಾಸ್ಟಲಿನೊ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಮಾಲಿನಿ ರೈ, ದ.ಕ.ಹಾಲು ಒಕ್ಕೂಟದ ನಿರ್ದೇಶಕ ಸುದಾಕರ್ ಶೆಟ್ಟಿ, ಗ್ರಾಮೀಣ ಸಮಿತಿ ಅದ್ಯಕ್ಷ ಥೋಮಸ್ ಮಸ್ಕರೇನಸ್, ಪುರಸಭಾ ಸದಸ್ಯರಾದ ಪ್ರತಿಮಾ, ರೆಹಮತ್, ನಳಿನಿ ಆಚಾರ್ಯ, ಸೋಮನಾಥ್ ನಾಯಕ್, ಕಾನೂನು ಘಟಕದ ರೆಹಮತ್ತುಲ್ಲಾ, ಸೇವಾದಳದ ಅಬ್ದುಲ್ಲಾ ಸಾಣೂರು, ಎಸ್‌ಸಿ ಘಟಕದ ಅಣ್ಣಪ್ಪ ನಕ್ರೆ, ಸುಬಿತ್ NR , ಆರೀಪ್ ಕಲ್ಲೊಟ್ಟೆ, ಸುನೀಲ್ ಭಂಡಾರಿ, ಶೋಭಾ, ರಿನಾ ಕ್ಯಾಸ್ಟಲಿನೊ,ಕಾಂತಿ ಶೆಟ್ಟಿ, ಪ್ರಿಯಾ, ಸತೀಶ್ ದೇವಾಡಿಗ, ರಾಜೇಂದ್ರ, ಸಂದೀಪ್ ಶೆಟ್ಟಿ, ದೀಪಕ್ ಶೆಟ್ಟಿ, ಹಾಗೂ ವಿವಿದ ಘಟಕದ ಅದ್ಯಕ್ಷರು, ಚುನಾಯಿತ ಜನಪ್ರತಿನಿಧಿಗಳು, ಗ್ರಾಮಿಣ ಸಮಿತಿಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ವಕ್ತಾರ ಶುಭದರಾವ್ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು, ಕಾರ್ಯದರ್ಶಿ ಪ್ರಭಾಕರ ಬಂಗೇರ ದನ್ಯವಾದವಿತ್ತರು.