ದ.ಕ.ಜಿಲ್ಲಾ ‘ಅಲ್‌ ಬಿರ್ರ್‌ ಶಾಲಾ ಸಂಗಮ’ ಕಾರ್ಯಕ್ರಮ

Update: 2023-11-07 16:29 GMT

ಮಂಗಳೂರು, ನ.7: ದ.ಕ.ಜಿಲ್ಲಾ ಅಲ್ ಬಿರ್ರ್‌ ಶಾಲೆಗಳ ಮ್ಯಾನೇಜ್ಮೆಂಟ್ ಪ್ರತಿನಿಧಿಗಳ ಹಾಗೂ ಸಂಯೋಜಕರ ವಿಷನ್-2030 ಕಾರ್ಯಕ್ರಮವು ಫರಂಗಿಪೇಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಕಚೇರಿಯಲ್ಲಿ ನಡೆಯಿತು.

ಅಲ್ ಬಿರ್ರ್‌ ಕೇಂದ್ರೀಯ ಸಮಿತಿಯ ನಿರ್ದೇಶಕ ಕೆ.ಪಿ. ಮುಹಮ್ಮದ್ ಕಲ್ಲಿಕೋಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಸ್ತ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಶರೀಫ್ ಫೈಝಿ ಕಡಬ ದುಆಗೈದರು. ರಫೀಕ್ ಮಾಸ್ಟರ್ ತರಗತಿ ನಡೆಸಿದರು. ಅಲ್ ಬಿರ್ರ್‌ ಕೇಂದ್ರೀಯ ತಪಾಸಣಾಧಿಕಾರಿ ಮೊಯಿದು ಕುಟ್ಟಿ ಮಾಸ್ಟರ್ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಫರಂಗಿಪೇಟೆ ರೇಂಜ್ ಮ್ಯಾನೇಜ್ಮೆಂಟ್ ಅಧ್ಯಕ್ಷ ಹಸನಬ್ಬ ಮೋನಾಕ, ಅಡ್ಯಾರ್ ಕಣ್ಣೂರು ಅಲ್ ಬಿರ್ರ‌್‌ ನಿರ್ದೇಶಕ ಅಬ್ದುಲ್ ಮಜೀದ್ ಹಾಜಿ, ಮುರ ಪುತ್ತೂರು, ಅಲ್ ಬರ್ರ‌್‌ ನಿರ್ದೇಶಕ ಸುಲೈಮಾನ್ ಮೌಲವಿ ಕಲ್ಲೆಗ, ಕೂರ್ನಡ್ಕ ಅಲ್ ಬಿರ್ರ್‌ ನಿರ್ದೇಶಕ ಅಫ್ಹಾಂ ತಂಳ್ ಪುತ್ತೂರು, ಕೈಕಂಬ ಹಾಗೂ ತೋಡಾರು ಅಲ್‌ ಬಿರ್ರ್‌ ನಿರ್ದೇಶಕರಾದ ಆರೀಫ್ ಕೈಕಂಬ, ಶರೀಫ್ ಕೈಕಂಬ, ಮೂಡುಬಿದಿರೆ ಅಲ್ ಬಿರ್ರ‌್‌ ನಿರ್ದೇಶಕ ಅಝೀಝ್ ಮಾಲಿಕ್ ಉಸ್ಮಾನ್, ಮೂಡುಬಿದಿರೆ ಪನ್ಯ ಅಲ್ ಬಿರ್ರ‌್‌ ನಿರ್ದೇಶಕ ಇಬ್ರಾಹಿಂ ಹಾಜಿ ಪನ್ಯ, ಅಡ್ಡೂರು ಅಲ್ ಬಿರ್ರ್‌ ನಿರ್ದೇಶಕ ಶೇಖ್ ಮೋನು, ಅಬ್ದುಲ್ ಖಾದರ್ ಅಡ್ಡೂರು, ರಫೀಕ್ ಅಡ್ಡೂರು, ಲೊರೆಟ್ಟೋಪದವು ಅಲ್ ಬಿರ್ರ್‌ ನಿರ್ದೇಶಕ ಅಲ್ತಾಫ್ ಲೊರೆಟ್ಟೊಪದವು, ಸುಲೈಮಾನ್ ಬೊಳ್ಳಾಯಿ, ಮಾಹಿನ್ ದಾರಿಮಿ ಪಾತೂರು ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಅಲ್ ಬಿರ್ರ್‌ ಸಂಯೋಜಕ ಅಬ್ದುಲ್ ಶುಕೂರ್ ದಾರಿಮಿ ಕರಾಯ ಸ್ವಾಗತಿಸಿದರು. ಆರಿಫ್ ಕೈಕಂಬ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News