ದ್ವಿತೀಯ ಪಿಯುಸಿ ಫಲಿತಾಂಶ: ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜಿಗೆ 97% ಫಲಿತಾಂಶ

ಕೊಣಾಜೆ; 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ದೇರಳಕಟ್ಟೆಯ ಕಣಚೂರು ಮಹಿಳಾ ಪದವಿಪೂರ್ವ ಕಾಲೇಜಿಗೆ 97% ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 198 ವಿದ್ಯಾರ್ಥಿನಿಯರಲ್ಲಿ 45 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ, 133 ವಿದ್ಯಾರ್ಥಿನಿಯರು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ (ಪಿಸಿಎಂಬಿ) 27 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಮಿಸಾಂ ಆತೀರ ಖಾನ್ 592 (98.68%)( ರಾಜ್ಯದಲ್ಲಿ 8 ನೇ ರ‍್ಯಾಂಕ್), ಅಫ್ಲಾ 572 (95.33%), ಅಂಕಗಳನ್ನು ಗಳಿಸಿರುತ್ತಾರೆ. ವಾಣಿಜ್ಯ ವಿಭಾಗದ ಕಂಪ್ಯೂಟರ್ ಸೈನ್ಸ್ (ಗಣಕ ವಿಜ್ಞಾನ) ವಿಭಾಗದಲ್ಲಿ 15 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಮಿಸ್ಬಾ ಫಾತಿಮಾ 572 (95.33 %) , ನಿಸ 558(93%) ಅಂಕ ಗಳಿಸಿರುತ್ತಾರೆ. ವಾಣಿಜ್ಯವಿಭಾಗದಲ್ಲಿ (HEBA) 02 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.ಆಯಿಷತ್ ಫಾಸಿಹ 526(87.66%) ಫಾತಿಮಾ ಸಲ್ವ 515(85.83%)ಅಂಕಗಳನ್ನು ಗಳಿಸಿರುತ್ತಾರೆ . ಕಲಾ ವಿಭಾಗದಲ್ಲಿ 01 ವಿದ್ಯಾರ್ಥಿನಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ತನಿಷಾ ಹಝರಾ 560 (93.33%) ಅಂಕಗಳನ್ನು ಗಳಿಸಿರುತ್ತಾರೆ. ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿನಿಯರಿಗೆ ಕಾಲೇಜಿನ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.