ದ.ಕ. ಜಿಲ್ಲಾ ಶೈಕ್ಷಣಿಕ ಸಮಾವೇಶ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ
ಉಳ್ಳಾಲ: ಶಿಕ್ಷಕರಿಗೆ ಉತ್ತಮ ಗೌರವ ಇದೆ. ಶಿಕ್ಷಕರಿಗೆ ನಿವೃತ್ತ ರಾಗುವವರೆಗೂ ವಿದ್ಯಾರ್ಥಿಗಳು ಇರುತ್ತಾರೆ. ಶಿಕ್ಷಣ ವನ್ನು ಚಾಲೆಂಜಿಂಗ್ ಆಗಿ ತೆಗೆದು ಕೊಂಡು ಹೋದರೆ ಮಾತ್ರ ಕಾರ್ಯ ಯಶಸ್ವಿಯಾಗುತ್ತದೆ. ಒಟ್ಟಿನಲ್ಲಿ ಈ ಕ್ಷೇತ್ರ ಅಭಿವೃದ್ಧಿ ಆಗಬೇಕು ಎಂಬುದೇ ಶಿಕ್ಷಕರ ಗುರಿ ಆಗಿದೆ. ಈ ನಡುವೆ ಡ್ರಗ್ , ಸಿಗರೇಟು ನಮಗೆ ಸವಾಲಾಗಿ ಪರಿಣಮಿಸಿದೆ. ಕೆಲವು ವಿದ್ಯಾರ್ಥಿಗಳು ಇದನ್ನೇ ಹವ್ಯಾಸ ವಾಗಿ ಮಾಡಿಕೊಳ್ಳುತ್ತಿರುವುದು ಖೇದಕರ ಎಂದು.ಪಿ.ಎ. ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ ಸರ್ಫರಾಝ್ ಹಾಶಿಂ ಹೇಳಿದರು.
ಅವರು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ ದ.ಕ.ಜಿಲ್ಲೆ ಇದರ ಆಶ್ರಯದಲ್ಲಿ ರಾಷ್ಟ್ರ ಮಟ್ಟದ ಅಭಿಯಾನದ ಅಂಗವಾಗಿ ಬಬ್ಬುಕಟ್ಟೆ ಹಿರಾ ಕಾಲೇಜು ನಲ್ಲಿ ರವಿವಾರ ನಡೆದ ದ.ಕ.ಜಿಲ್ಲಾ ಶೈಕ್ಷಣಿಕ ಸಮಾವೇಶ ಮತ್ತು ನಿವೃತ್ತ ಶಿಕ್ಷಕ ರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಮಾರ್ಗ ದರ್ಶನ ನೀಡಿದರು.
ಶಿಕ್ಷಣ ಜೊತೆ ಇತರ ಕಾರ್ಯ ಚಟುವಟಿಕೆ ಹಾಗೂ ಮೆದುಳಿಗೆ ಆಹಾರ ಒದಗಿಸುವ ಕೆಲಸ ಆಗಬೇಕಾಗಿದೆ. ದೇಹದ ಆರೋಗ್ಯ ಜೋಪಾನ ವಾಗಿ ಇಟ್ಟುಕೊಂಡಲ್ಲಿ ಯಾವುದೇ ತೊಂದರೆ ನಮಗೆ ಬರುವುದಿಲ್ಲ. ಕಡಿಮೆ ಅವಧಿಯಲ್ಲಿ ಹೆಚ್ಚು ಶಿಕ್ಷಣ ಪಡೆಯಲು ದಾರಿ ಇದೆ.ಅದನ್ನು ಬಳಕೆ ಮಾಡಬೇಕು ಎಂದು ಕರೆ ನೀಡಿದರು.
ಆದರ್ಶ ಶಿಕ್ಷಕ ಎಂಬ ವಿಚಾರ ದ ಬಗ್ಗೆ ವಿಚಾರ ಗೋಷ್ಠಿ ನಡೆಸಿ ಮಾತನಾಡಿದ ಟಿಪ್ಪು ಸುಲ್ತಾನ್ ನಿವೃತ್ತ ಶಿಕ್ಷಕ ಎಂ.ಎಚ್. ಮಲಾರ್ ಅವರು ತಮ್ಮ ಅನುಭವ ವನ್ನು ಹಂಚಿಕೊಂಡರು. ಸುಜೀರ್ ಸರ್ಕಾರಿ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕ ಬಿ. ಮೊಹಮ್ಮದ್ ತುಂಬೆ ,ಸಜಿಪ ಶಾಲೆಯ ನಿವೃತ್ತ ಶಿಕ್ಷಕ ಅಮಾನುಲ್ಲಾ ಖಾನ್ ಮಾತನಾಡಿದರು.
ಐಟಾ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ರಿಗೆ ಸನ್ಮಾನ ಮಾಡಲಾಯಿತು. ಕೆಎಂಕೆ ಮಂಜನಾಡಿ ನಿವೃತ್ತ ಶಿಕ್ಷಕರ ಪರಿಚಯ ಮಾಡಿದರು.
ಕಾರ್ಯಕ್ರಮ ದಲ್ಲಿ ಬದ್ರಿಯಾ ಕಾಲೇಜು ನಿವೃತ್ತ ಮುಖ್ಯ ಶಿಕ್ಷಕರಾದ ಡಾ.ಇಸ್ಮಾಯಿಲ್,ಹಂಝ ಯು.ಎನ್,ಸಮನ್ವಯ ಶಿಕ್ಷಕರ ಸಂಘ ಜಿಲ್ಲಾ ಅಧ್ಯಕ್ಷ ಅಬ್ದುಲ್ ಮಜೀದ್, ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ , ಶಾಂತಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎ.ಎಚ್.ಮಹಮೂದು, ಕಾರ್ಯ ದರ್ಶಿ ಅಬ್ದುಲ್ ಕರೀಂ,ಹಿರಾ ನಂಯುಕ್ತ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಫಾತಿಮ ಮೆಹರೂನ್ ಉಪಸ್ಥಿತರಿದ್ದರು.
ಹಿರಾ ವಿದ್ಯಾ ಸಂಸ್ಥೆ ಯ ಶಿಕ್ಷಕ ಅಬ್ದುಲ್ ಲತೀಫ್ ಆಲಿಯಾ ಕಿರಾಅತ್ ಪಠಿಸಿದರು. ಐಟಾ ಬಂಟ್ವಾಳ ತಾಲೂಕು ಅಧ್ಯಕ್ಷ ರಿಯಾಝ್ ಬಂಟ್ವಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಐಟಾ ಉಳ್ಳಾಲ ಅಧ್ಯಕ್ಷ ಡಾ.ಮುಹಮ್ಮದ್ ಮುಬೀನ್ ಕಾರ್ಯಕ್ರಮ ನಿರೂಪಿಸಿದರು.