ಗೋಳ್ತಮಜಲು | ಖಾಸಗಿ ಬಸ್-ಪಿಕಪ್ ವಾಹನದ ಮಧ್ಯೆ ಅಪಘಾತ: ಹಲವರಿಗೆ ಗಾಯ

Update: 2024-04-04 06:00 GMT

ವಿಟ್ಲ, ಎ.4: ಖಾಸಗಿ ಬಸ್ ಮತ್ತು ಪಿಕಪ್ ವಾಹನವೊಂದರ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಹಲವರು ಗಾಯಗೊಂಡ ಘಟನೆ ವಿಟ್ಲ-ಕಲ್ಲಡ್ಕ ರಸ್ತೆಯ ಗೋಳ್ತಮಜಲು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.

ವಿಟ್ಲ ಕಡೆಗೆ ಕಾಂಕ್ರಿಟ್ ಮಿಕ್ಸರ್ ಯಂತ್ರವನ್ನು ಒಯ್ಯುತ್ತಿದ್ದ ಪಿಕಪ್ ಮತ್ತು ವಿಟ್ಲದಿಂದ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸು ನಡುವೆ ಈ ಅಪಘಾತ ಸಂಭವಿಸಿದೆ.

ಪಿಕಪ್ ನಲ್ಲಿ ಕಾಂಕ್ರಿಟ್ ಕೆಲಸಕ್ಕೆ ತೆರಳುತ್ತಿದ್ದ ಹಲವು ಕಾರ್ಮಿಕರು ಇದ್ದರೆನ್ನಲಾಗಿದೆ. ಬಸ್ಸಿನ ಬೆಳಗ್ಗಿನ ಟ್ರಿಪ್ ನಲ್ಲಿ ಪ್ರಯಾಣಿಕರು ತುಂಬಿದ್ದರೆನ್ನಲಾಗಿದ್ದು, ಗಾಯಾಳುಗಳ ವಿವರ ಲಭ್ಯವಾಗಿಲ್ಲ.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News