ಉಪ್ಪಿನಂಗಡಿ: ಗೂಡ್ಸ್ ವಾಹನ ಚಾಲಕನಿಗೆ ಹಲ್ಲೆ; ಪ್ರಕರಣ ದಾಖಲು

Update: 2024-08-29 19:48 IST
ಉಪ್ಪಿನಂಗಡಿ: ಗೂಡ್ಸ್ ವಾಹನ ಚಾಲಕನಿಗೆ ಹಲ್ಲೆ; ಪ್ರಕರಣ ದಾಖಲು
  • whatsapp icon

ಉಪ್ಪಿನಂಗಡಿ: ರಸ್ತೆ ಬದಿಯಲ್ಲಿ ನಿಂತು ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಾಗ ಹತ್ತಿರದಿಂದ ವಾಹನ ಚಲಾಯಿಸಿರುವುದನ್ನು ಆಕ್ಷೇಪಿಸಿದ ವ್ಯಕ್ತಿಯೋರ್ವ ಗೂಡ್ಸ್ ವಾಹನವನ್ನು ತಡೆಗಟ್ಟಿ ಚಾಲಕನಿಗೆ ಅವಾಚ್ಯ ಶಬ್ಧದಿಂದ ಬೈದು ಹಲ್ಲೆ ನಡೆಸಿರುವ ಘಟನೆ ಕಣಿಯೂರು ಗ್ರಾಮದ ಪದ್ಮುಂಜ ಎಂಬಲ್ಲಿ ಸಂಭವಿಸಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಣಿಯೂರು ಗ್ರಾಮದ ಸಿದ್ದಿಕ್ ಹಲ್ಲೆಗೆ ಒಳಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆರೋಪಿ ಶರತ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಸಿದ್ದಿಕ್ ತನ್ನ ಗೂಡ್ಸ್ ವಾಹನವನ್ನು ಕಲ್ಲೇರಿಯಿಂದ ಪದ್ಮುಂಜ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಆರೋಪಿ ಶರತ್ ರಸ್ತೆ ಬದಿಯಲ್ಲಿ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದು, ಇದೇ ವೇಳೆ ವಿರುದ್ಧ ದಿಕ್ಕಿನಿಂದ ಬೇರೆ ವಾಹನ ಬಂದಿದ್ದು, ಆ ವಾಹನಕ್ಕೆ ಸೈಡ್ ಕೊಡುವ ಸಲುವಾಗಿ ರಸ್ತೆಯ ಅಂಚಿನಲ್ಲಿ ಹೋಗಿದ್ದು, ಇದನ್ನು ಆಕ್ಷೇಪಿಸಿ ಶರತ್ ಬೈದಿದ್ದಾನೆ. ಆಗ ಸಿದ್ದಿಕ್ ತನ್ನ ವಾಹನವನ್ನು ಚಲಾಯಿಸಿಕೊಂಡು ಮುಂದೆ ಹೋಗಿದ್ದು, ಈ ವೇಳೆ ಬೈಕ್‍ನಲ್ಲಿ ಬಂದ ಆರೋಪಿ ಶರತ್  ಹಲ್ಲೆ ನಡೆಸಿರುವುದಾಗಿ ಸಿದ್ದಿಕ್ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News