ಹಳೆಕೋಟೆ: ಶಿಕ್ಷಕರ ದಿನ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ

Update: 2024-09-13 07:15 GMT

ಉಳ್ಳಾಲ: ಹೆತ್ತವರು ಮತ್ತು ಗುರುಗಳನ್ನು ಯಾವತ್ತೂ ಮರೆಯಬಾರದು. ಯಾಕೆಂದರೆ ತಾಯಿ ನಮಗೆ ಜನ್ಮ ಕೊಟ್ಟರೆ ತಂದೆ ಬದುಕು ರೂಪಿಸುತ್ತಾರೆ, ಶಿಕ್ಷಕರು ಅಕ್ಷರ ಜ್ಞಾನ ನೀಡಿ ಮುಂದಿನ ಬದುಕಿಗೆ ದಾರಿ ತೋರಿಸುತ್ತಾರೆ ಎಂದು ಸಯ್ಯದ್ ಮದನಿ ದರ್ಗಾದ ಮಾಜಿ ಪ್ರಧಾನ ಕಾರ್ಯದರ್ಶಿ ಮೊಮುಹಮ್ಮದ್ ತ್ವಾಹ ಹೇಳಿದರು.

ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದ ಹಳೆಕೋಟೆ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ನಡೆದ ಶಿಕ್ಷಕರ ದಿನ ಪ್ರಯುಕ್ತ ನಡೆದ ಗುರು ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕರ ದಿ‌ನ ಕಾರ್ಯಕ್ರಮ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆಯುವುದರಿಂದ ಈ ದಿನದ ಮಹತ್ವದ ಅರಿವಿನ ಜೊತೆಗೆ ಮುಂದಿನ ದಿನಗಳಲ್ಲಿ ತಾವೂ ಶಿಕ್ಷಕರಾಗಲು ಪ್ರೇರಣೆ ಸಿಗುತ್ತದೆ ಎಂದು ತಿಳಿಸಿದರು.

ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷ ಯು.ಎಚ್.ಹಸೈನಾರ್ ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಫಾರೂಕ್ ಯು.ಎಚ್, ಶಾಲಾ ಸಂಚಾಲಕ ಇಸ್ಮಾಯಿಲ್ ಹಾಜಬ್ಬ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಯು.ಎಚ್.ಇಬ್ರಾ ಹಿಂ, ಕೋಶಾಧಿಕಾರಿ ಕೋಶಾಧಿಕಾರಿ ಫಾರೂಕ್, ಪ್ರತಿಯೊಬ್ಬರ ಜೀವನದ ಉನ್ನತಿಯಲ್ಲಿ ಶಿಕ್ಷಕರ ಶ್ರಮ ಮಹತ್ವದ್ದು. ಶಿಕ್ಷಕರ ದಿನ ಕಾರ್ಯಕ್ರಮ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆಯುವುದರಿಂದ ಈ ದಿನದ ಮಹತ್ವದ ಅರಿವಿನ ಜೊತೆಗೆ ಮುಂದಿನ ದಿನಗಳಲ್ಲಿ ತಾವೂ ಶಿಕ್ಷಕರಾಗಲು ಪ್ರೇರಣೆ ಸಿಗುತ್ತದೆ ಎಂದು ತಿಳಿಸಿದರು.

ಕಾರ್ಯದರ್ಶಿ ಅಲ್ತಾಫ್ ಯು.ಎಚ್, ಕೇಂದ್ರ ಜುಮಾ ಮಸೀದಿಯ ಸದಸ್ಯ ಅಶ್ರಫ್ ಯು.ಡಿ., ಗುತ್ತಿಗೆದಾರ ಯು.ಎಚ್.ಮಹಮ್ಮದ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮೋಹನ್ ಕುಮಾರ್, ಶಿಕ್ಷಕಿ ವಿನಯ, ಶಶಿಕಲಾ ಶೆಟ್ಟಿ, ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿರುವ ವಿವಿಧ ಶಾಲೆ, ಕಾಲೇಜುಗಳ ಮುಖ್ಯಶಿಕ್ಷಕರು, ಪ್ರಾಂಶುಪಾಲರು ಉಪಸ್ಥಿತರಿದ್ದರು.

ಕೆಎಂಕೆ ಮಂಜನಾಡಿ ಸ್ವಾಗತಿಸಿದರು. ಶಿಕ್ಷಕಿ ಶಕೀಲಾ ವಂದಿಸಿದರು. ಅರ್ಫಿನ್ ಮತ್ತು ಸಫಾ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News