ಇಸ್ಲಾಹಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಬಹುಭಾಷಾ ಕವಿಗೋಷ್ಠಿ

Update: 2025-01-15 06:02 GMT

ಉಳ್ಳಾಲ: ಇಸ್ಲಾಹಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿತ್ತು. ಪಿ.ಎ ಕಾಲೇಜು ಕೊಣಾಜೆ ಕನ್ನಡ ಉಪನ್ಯಾಸಕಿ ಸಾರ ಮಷ್ಕುರುನ್ನಿಸಾ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು , ಲೇಖನದ ಮಹತ್ವ, ಕವನ, ಕಥೆ ಹಾಗೂ ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಲು ಸಲಹೆ ನೀಡಿದರು. ಕವನಗಳನ್ನು ವಾಚಿಸಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಿ. ಅಬ್ದುಲ್ ರಝಾಕ್ , ಕಾರ್ಯದರ್ಶಿ ಅಹಮದ್ ಕುಂಞಿ ಮಾಸ್ಟರ್ ರವರು ವಿದ್ಯಾರ್ಥಿಗಳಿಗೆ ಹಿತವಚನ ನೀಡಿ ಸಾಹಿತ್ಯ ರಚನೆಗೆ ಪ್ರೇರೇಪಿಸಿದರು.

ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಫಯಾಝ್ ಎ. ಎಂ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಸ್ವತ: ಬರೆದ ಕವನಗಳನ್ನು ವಾಚಿಸಿದರು. ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಸುಮಂಗಲ ಶೆಟ್ಟಿ ಬರವಣಿಗೆಯಲ್ಲಿರುವ ಶಕ್ತಿಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು.

ಕನ್ನಡ‌, ಹಿಂದಿ, ಇಂಗ್ಲಿಷ್, ಅರೇಬಿಕ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸುಮಾರು 55 ವಿದ್ಯಾರ್ಥಿಗಳು ಬಹುಭಾಷಾ ಕವಿಗೋಷ್ಠಿಯಲ್ಲಿ ಪಾಲ್ಗೊಂಡರು. ಕೆಲವು ಶಿಕ್ಷಕರು ಕವನಗಳನ್ನು ವಾಚಿಸಿ ಗಮನ ಸೆಳೆದರು . ವ್ಯವಸ್ಥಾಪಕಿ ಅನಿಲಾ ಶೆಟ್ಟಿ , ಶಾಲೆಯ ಮುಖ್ಯೋಪಾಧ್ಯಾಯನಿ ಹರಿಣಾಕ್ಷಿಯವರು ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕಿ ರಕ್ಷಿತಾ ವಿನಯ್ ಸ್ವಾಗತ ಭಾಷಣ ಮಾಡಿದರು, ಹಿಂದಿ ಉಪನ್ಯಾಸಕಿ ಕವಿತಾ ಯು.ಕೆ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ಆಂಗ್ಲ ಉಪನ್ಯಾಸಕರಾದ ಮುಹಮ್ಮದ್ ಮೂನಿಸ್ ಅಹ್ಸನ್ ನಿರೂಪಿಸಿದರು.


Delete Edit


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News