ಕುದ್ರೋಳಿ ಮುಸ್ಲಿಂ ಐಕ್ಯತಾ ವೇದಿಕೆಯಿಂದ ಸನ್ಮಾನ
ಮಂಗಳೂರು: ಕುದ್ರೋಳಿಯ ಮುಸ್ಲಿಂ ಐಕ್ಯತಾ ವೇದಿಕೆಯ ವತಿಯಿಂದ ಕುದ್ರೋಳಿಯ ಫಾತಿಮಾ ಇಸ್ಲಾಮಿಕ್ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.90ರಷ್ಟು ಅಂಕ ಪಡೆದ ಹಾಗೂ ಕುರ್‌ಆನ್ ಕಂಠ ಪಾಟ ಮಾಡಿದ ಕುದ್ರೋಳಿ ಪರಿಸರದ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರೊತ್ಸಾಹ ಧನ ವಿತರಿಸಲಾಯಿತು.
ವೇದಿಕೆಯ ಅಧ್ಯಕ್ಷ ಯಾಸೀನ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಬಂದರ್ ಠಾಣೆಯ ನಿರೀಕ್ಷಕ ಅಝ್ಮತ್ ಅಲಿ, ಬರ್ಕೆ ಶಿವ ಫ್ರೆಂಡ್ಸ್ ಅಧ್ಯಕ್ಷ ದೇವದಾಸ್ ಅಮೀನ್, ವೇದಿಕೆಯ ಕಾರ್ಯಾಧ್ಯಕ್ಷ ಮತ್ತು ಮಾಜಿ ಮೇಯರ್ ಕೆ ಅಶ್ರಫ್, ಕಾರ್ಪೊರೇಟರ್ ಹಾಜಿ ಶಂಸುದ್ದೀನ್ ಭಾಗವಹಿಸಿದ್ದರು.
ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ಪಿಯು ಕಾಲೇಜಿನ ಪ್ರಾಂಶುಪಾಲ ರಘುರಾಜ್ ಕದ್ರಿ ಸಂಪನ್ಮೂಲ ವ್ಯಕ್ತಿಯಾಗಿ ದ್ದರು. ಶೇ.100 ಫಲಿತಾಂಶ ದಾಖಲಿಸಲು ಶ್ರಮಪಟ್ಟ ಬ್ರೈಟ್ ಶಾಲೆಯ ಆಡಳಿತ ಸಮಿತಿ, ಮುಖ್ಯಶಿಕ್ಷಕ ಹಾಗೂ ಶಿಕ್ಷಕ ವೃಂದವನ್ನು ಸನ್ಮಾನಿಸಲಾಯಿತು. ಐಕ್ಯತೆ ವೇದಿಕೆಯ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ಸಹಕರಿಸುವ 20 ಮಂದಿ ದಾನಿಗಳಿಗಳನ್ನು ಸನ್ಮಾನಿಸಲಾಯಿತು. ಸೆ.22ರಂದು ವೇದಿಕೆಯ ವತಿಯಿಂದ ಪ್ರಥಮ ಬಾರಿಗೆ ನಡೆಯುವ ರಕ್ತದಾನ ಶಿಬಿರದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಸಂಸ್ಥೆಯ ಕೋಶಾಧಿಕಾರಿ ಮಕ್ಬೂಲ್ ಅಹ್ಮದ್, ಜೊತೆ ಕಾರ್ಯದರ್ಶಿ ಮಝೈರ್ ಅಹ್ಮದ್, ಮಕ್ಬೂಲ್ ಜಮಾಅತ್, ಇಸ್ಮಾಯಿಲ್ ಬಿ.ಎ,. ವಹಾಬ್, ಲತೀಫ್ ಕೆ.ಕೆ, ಅಶ್ರಫ್ ಮಾಸ್, ಸಂಚಾಲಕರಾದ ಅಬ್ದುಲ್ ಅಝೀಝ್, ಮುಸ್ತಾಕ್ ಅಹ್ಮದ್ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಜಿ ಬಿ. ಅಬೂಬಕ್ಕರ್ ಸ್ವಾಗತಿಸಿದರು. ಸದಸ್ಯರಾದ ಎನ್‌ಕೆ ಅಬೂಬಕ್ಕರ್ ವಂದಿಸಿದರು. ಉಪಾಧ್ಯಕ್ಷ ಮುಹಮ್ಮದ್ ಹಾರೀಸ್ ಕಾರ್ಯಕ್ರಮ ನಿರೂಪಿಸಿದರು.