ಮಾದಕ ದ್ರವ್ಯ ಮತ್ತು ಅನೈತಿಕತೆಯ ವಿರುದ್ಧ ಯುವಕರು ಎಚ್ಚೆತ್ತುಕೊಳ್ಳಬೇಕು: ಖಾಝಿ ಬಂಬ್ರಾಣ ಉಸ್ತಾದ್
ಪುತ್ತೂರು: ಮಾದಕ ದ್ರವ್ಯದ ಉಪಯೋಗ, ಅನೈತಿಕತೆ, ಅನಾಚಾರ, ದುಂದು ವೆಚ್ಚಗಳ ವಿರುದ್ಧ ಯುವ ಸಮೂಹ ಎಚ್ಚೆತ್ತು ಕೊಂಡು ಕಾರ್ಯಪ್ರವೃತ್ತರಾದರೆ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಿದೆ ಎಂದು ಸಮಸ್ತ ಕರ್ನಾಟಕ ಮುಶಾವರದ ಪ್ರಧಾನ ಕಾರ್ಯದರ್ಶಿ ಖಾಝಿ ಬಿ.ಕೆ. ಅಬ್ದುಲ್ ಖಾದಿರ್ ಅಲ್‌ಖಾಸಿಮಿ ಬಂಬ್ರಾಣ ಹೇಳಿದರು.
ಪುತ್ತೂರು ಕಲ್ಲೇಗ ಜುಮಾ ಮಸೀದಿಯ ವಠಾರದ ಶಂಸುಲ್ ಉಲಮಾ ನಗರದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರದ ವತಿಯಿಂದ ನಡೆದ ಸಮಸ್ತ ಯುವ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜವನ್ನು ಸರಿಯಾದ ದಿಶೆಯಲ್ಲಿ ಮುನ್ನಡೆಸಲು ತರಬೇತಿ ಪಡೆಯಬೇಕಾದ ಶಿಕ್ಷಣ ಸಂಸ್ಥೆಗಳ ಪರಿಸರ ಕೂಡಾ ಈಗ ಅನೈತಿಕ ಚಟುವಟಿಕೆಗಳಿಂದ ಮಲಿನವಾಗುತ್ತಿದೆ. ಪೋಷಕರು ಕಂಡೂ ಕಾಣದಂತೆ ವರ್ತಿಸಿದರೆ ಮುಂದಿನ ದಿನಗಳಲ್ಲಿ ಈ ಸಮಾಜ ಅದರ ದುಷ್ಪರಿಣಾಮ ಎದುರಿಸಬೇಕಾಗಬಹುದು. ಅದನ್ನು ತಡೆದು ಅಕ್ರಮ ಚಟುವಟಿಕೆಗಳ ಬಲಿಪಶುಗಳನ್ನು ಮನಃಪರಿವರ್ತನೆ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಎಲ್ಲಾ ಸಂಘ ಸಂಸ್ಥೆಗಳು ಮಾಡಬೇಕಾಗಿದೆ ಎಂದು ಬಂಬ್ರಾಣ ಉಸ್ತಾದ್ ಹೇಳಿದರು.
ಸಮಸ್ತ ಕರ್ನಾಟಕ ಮುಶಾವರದ ಕಾರ್ಯಾಧ್ಯಕ್ಷ ಕೆ.ಎಂ. ಉಸ್ಮಾನುಲ್ ಫೈಝಿ ತೋಡಾರು ಅಧ್ಯಕ್ಷತೆ ವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಯ್ಯಿದ್ ಅಮೀರ್ ತಂಳ್ ಕಿನ್ಯಾ ದುಆಗೈದರು. ಅನ್ವರ್ ಮುಹಿಯುದ್ದೀನ್ ಹುದವಿ ಆಲುವಾ ಮತ್ತು ಪಿ.ಎಂ ಅಬ್ದುಸ್ಸಲಾಂ ಬಾಖವಿ ವಡಕ್ಕೆಕಾಡ್ ವಿಷಯ ಮಂಡಿಸಿದರು. ಕಲ್ಲೇಗ ಜಮಾಅತ್ ಅಧ್ಯಕ್ಷ ಕೆ.ಪಿ. ಮುಹಮ್ಮದ್ ಹಾಜಿ ಧ್ವಜಾರೋಹಣ ನೆರವೇರಿಸಿದರು.
ಸಯ್ಯಿದ್ ಯಹ್ಯಾ ಅಲ್‌ಹಾದಿ ತಂಳ್ ಕಬಕ, ಮೂಸಲ್ ಫೈಝಿ ಮಿತ್ತೂರು, ಕೆ.ಪಿ.ಎಂ. ಶರೀಫ್ ಫೈಝಿ ಕಡಬ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಎಸ್.ಬಿ. ಮುಹಮ್ಮದ್ ದಾರಿಮಿ ಉಪ್ಪಿನಂಗಡಿ, ಇಸ್ಮಾಯೀಲ್ ಫೈಝಿ ಸೂರಿಂಜೆ, ಖಾಸಿಂ ದಾರಿಮಿ ನಂದಾವರ, ಮೂಸಾ ದಾರಿಮಿ ತೋಡಾರು, ಅಬೂಬಕರ್ ಸಿದ್ದೀಕ್ ದಾರಿಮಿ ಮೂಡುಬಿದಿರೆ, ಇಬ್ರಾಹಿಂ ದಾರಿಮಿ ಕಡಬ, ಉಮರ್ ಫೈಝಿ ಸಾಲ್ಮರ, ಮುಫತ್ತಿಷ್ ಮುಹಮ್ಮದ್ ಹನೀಫ್ ಮುಸ್ಲಿಯಾರ್, ಉಸ್ಮಾನ್ ದಾರಿಮಿ ಬಾಳೆಪುಣಿ, ಇಸ್ಮಾಯೀಲ್ ದಾರಿಮಿ ನಾಳ, ಜಂಇಯ್ಯತುಲ್ ಖುತಬಾ ಜಿಲ್ಲಾಧ್ಯಕ್ಷ ಅಬ್ದುರ‌್ರಶೀದ್ ರಹ್ಮಾನಿ ಪರ್ಲಡ್ಕ, ಆದಂ ದಾರಿಮಿ ಅಜ್ಜಿಕಟ್ಟೆ, ಅಬ್ದುಲ್ ಅಝೀಝ್ ಫೈಝಿ ಪಟ್ಟೋರಿ, ಹನೀಫ್ ದಾರಿಮಿ ಸವಣೂರು, ಜಂಇಯ್ಯತುಲ್ ಮುಅಲ್ಲಿಮೀನ್ ಜಿಲ್ಲಾಧ್ಯಕ್ಷ ಶಂಸುದ್ದೀನ್ ದಾರಿಮಿ, ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಇಸ್ಮಾಯೀಲ್ ತಂಳ್ ಉಪ್ಪಿನಂಗಡಿ, ಸುಲೈಮಾನ್ ಮೌಲವಿ ಕಲ್ಲೇಗ, ದಾರಿಮೀಸ್ ಜಿಲ್ಲಾಧ್ಯಕ್ಷ ಕೆ.ಬಿ. ಅಬ್ದುಲ್ ಖಾದಿರ್ ದಾರಿಮಿ ಕೊಡುಂಗಾಯಿ, ಕಾರ್ಯದರ್ಶಿ ಅಬ್ದುಲ್ ಕರೀಂ ದಾರಿಮಿ, ಸಮಸ್ತ ವಿದ್ಯಾಭ್ಯಾಸ ಮಂಡಳಿಯ ಸದಸ್ಯ ರಶೀದ್ ಹಾಜಿ ಪರ್ಲಡ್ಕ, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಕತಾರ್ ಇಬ್ರಾಹಿಂ ಹಾಜಿ, ಹಾಜಿ ಹನೀಫ್ ಉದಯ, ಅಬೂಬಕರ್ ಮುಲಾರ್, ಖಾದರ್ ಮಾಸ್ಟರ್ ಬಂಟ್ವಾಳ, ಹಾಜಿ ಎಲ್.ಟಿ. ಅಬ್ದುರ‌್ರಝಾಕ್, ಸ್ವಾಗತ್ ಅಬೂಬಕರ್ ದೇರಳಕಟ್ಟೆ, ಸ್ಥಳೀಯ ಖತೀಬ್ ಹಸನ್ ಅರ್ಶದಿ, ಜಮಾಅತ್ ಕಾರ್ಯದರ್ಶಿ ಅಬ್ದುರ‌್ರಹ್ಮಾನ್, ಕೋಶಾಧಿಕಾರಿ ಅಶ್ರಫ್ ಹಾಜಿ, ಉಪಾಧ್ಯಕ್ಷರಾದ ಸಿದ್ದೀಕ್ ಹಾಜಿ, ಶುಕೂರು ಹಾಜಿ ಕಲ್ಲೇಗ, ಮೂಸಾ ಕುಂಞಿ, ಆಸಿಫ್ ಶಾಂತಿನಗರ, ಹಸೈನಾರ್ ಬನಾರಿ ಮತ್ತಿತರರು ಉಪಸ್ಥಿತರಿದ್ದರು.
ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ ಸ್ವಾಗತಿಸಿದರು. ಕೆ.ಐ. ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ವಂದಿಸಿದರು. ಪಿ.ಎಂ. ಉಮರ್ ದಾರಿಮಿ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.