ಗಲ್ಲಿ ಕ್ರಿಕೆಟ್ ಅನ್ನು ಸಿಲ್ಲಿ ಮಾಡಬೇಡಿ: ಹಾಸ್ಯ ನಟ ಉಮೇಶ್ ಮಿಜಾರ್
ಮಂಗಳೂರು: ಕಂದಕ್ ಪ್ರದೇಶದಲ್ಲಿ ಲೇಟ್ ಸರೋಜಿನಿ ಪುಂಡಲೀಕ ಕರ್ಕೇರ ಬೆಂಗ್ರೆ ಸ್ಮರಣಾರ್ಥ ʼಗಲ್ಲಿ ಪ್ರೀಮಿಯರ್ ಲೀಗ್ ಸೀಸನ್- 4 ಕಂದಕ್ - 2025ʼ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಜೆರ್ಸಿ ಅನಾವರಣ ಕಾರ್ಯಕ್ರಮವು ನಗರದ ಕಂದಕ್ ಗಲ್ಲಿ ಕ್ರೀಡಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ಹಾಸ್ಯ ಕಲಾವಿದ ಉಮೇಶ್ ಮಿಜಾರ್ ಮಾತನಾಡಿ, ಇಲ್ಲಿ ಕ್ರಿಕೆಟ್ ಆಡಿದವರು ಮುಂದೊಂದು ದಿನ ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ಸಾಧ್ಯವಿದೆ. ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ದೋನಿ ಮತ್ತು ಹಲವು ಆಟಗಾರರು ಗಲ್ಲಿ ಕ್ರಿಕೆಟ್ ಆಡಿದವರು ಎಂದು ಉಮೇಶ್ ಮಿಜಾರ್ GPL ಕ್ರಿಕೆಟ್ ಪಂದ್ಯಾಟಕ್ಕೆ ಶುಭಕೋರಿ ಆಟಗಾರರನ್ನು ಪ್ರೋತ್ಸಹಿಸಿದರು.
ಟೂರ್ನಿಯಲ್ಲಿ ಕಂದಕ್ ಸೂಪರ್ ಕಿಂಗ್, ಕಂದಕ್ ಯುನೈಟೆಡ್, ಕಂದಕ್ ಬುಲ್ಸ್, ಕಂದಕ್ ವಾರಿಯರ್ಸ್, ರಾಯಲ್ ಕಂದಕ್, ಸಿಟಿಜನ್ ಕಂದಕ್, ಕಂದಕ್ ನೈಟ್ ರೈಡರ್ಸ್ ಒಟ್ಟು 7 ತಂಡಗಳು ಭಾಗವಹಿಸಲಿದ್ದು, ಜಿಪಿಎಲ್-4 ನ ಉದ್ಘಾಟನಾ ಪಂದ್ಯ ಜನವರಿ 10 ರಂದು ಕಂದಕ್ ನೈಟ್ ರೈಡರ್ ಮತ್ತು ಕಂದಕ್ ಯುನೈಟೆಡ್ ನಡುವೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ದಿ. ಸರೋಜಿನಿ ಪುಂಡಲೀಕ ಕರ್ಕೇರ ಬೆಂಗ್ರೆ ಪುತ್ರ ಮತ್ಸ್ಯ ಉದ್ಯಮಿ ಭಾಸ್ಕರ್ ಬೆಂಗ್ರೆ, ಬರ್ಕೆ ಫ್ರೆಂಡ್ಸ್ ಸ್ಥಾಪಕಾದ್ಯಕ್ಷ ಯಜ್ಙೇಶ್ವರ್ ಯದ್ದು, ಪಾಲಿಕೆ ಗುತ್ತಿಗೆದಾರರಾದ ಸಂತೋಷ್ ಶೆಟ್ಟಿ, ಆದಿತ್ಯ ಸುಧಾಕರ್, ಸ್ಥಳೀಯ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್, ಎನ್.ಎಮ್ ಕ್ರಿಕೆಟ್ ತಂಡದ ವ್ಯವಸ್ಥಾಪಕ ಕಿಶನ್ ಬರ್ಕೆ, ದ.ಕ ಜಿಲ್ಲಾ ಪುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಡಿ.ಎಂ. ಅಸ್ಲಾಂ, ನವರಂಗ್ ಡಿಜಿಟಲ್ ಮಾಲಕರಾದ ಮನೋಜ್ ಬೆಂಗ್ರೆ, ಢೈಕಿನ್ ಫಿಶರೀಸ್ ಮಾಲಕರಾದ ಬಿ ಇದ್ದಿನ್ ಕುಂಙಿ ಇವರೊಂದಿಗೆ ಏಳು ತಂಡದ ಮಾಲಕರು, ನಾಯಕರು ಉಪಸ್ಥಿತರಿದ್ದರು. ರಫೀಕ್ ಕಾರ್ಯಕ್ರಮ ನಿರೂಪಿಸಿದರು.