ಕಕ್ಕಿಂಜೆ: ಹಿದಾಯ ಫೌಂಡೇಶನ್ ನಿಂದ ವೈದ್ಯಕೀಯ ತಪಾಸಣೆ ಶಿಬಿರ

Update: 2024-09-30 05:16 GMT

ಬೆಳ್ತಂಗಡಿ: ಹಿದಾಯ ಫೌಂಡೇಶನ್ ಮಂಗಳೂರು, ಮುಹಿಯುದ್ದೀನ್ ಜುಮಾ ಮಸ್ಜಿದ್, ಎಸ್ಕೆಎಸ್ಸೆಸ್ಸೆಫ್ ಕಕ್ಕಿಂಜೆ, ಯೆನೆಪೊಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ದೇರಳಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ವೈದ್ಯಕೀಯ ತಪಾಸಣೆ ಶಿಬಿರ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ಸೆ.29ರಂದು ಕಕ್ಕಿಂಜೆಯ ನೂರುಲ್ ಇಸ್ಲಾಂ ಮದ್ರಸದಲ್ಲಿ ನಡೆಯಿತು.

ಹಿದಾಯ ಫೌಂಡೇಶನ್ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ಅಬೂಬಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ದುಆ ನೆರವೇರಿಸಿದರು.

‌ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬ, ಹಿದಾಯ ಫೌಂಡೇಶನ್ ಆಡಳಿತಾಧಿಕಾರಿ ಆಬಿದ್ ಅಸ್ಗರ್, ಯೆನೆಪೊಯ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಅಶ್ವಿನಿ ಶೆಟ್ಟಿ, ಎಂಜೆಎಂ ಸೇವಾ ಸಮಿತಿಯ ಅಧ್ಯಕ್ಷ ಅರೆಕ್ಕಲ್ ಇಬ್ರಾಹೀಂ, ಎಂ‌ಜೆಎಂ ಜಲಾಲಿಯಾ ನಗರ ಅಧ್ಯಕ್ಷ ಸಿದ್ದೀಕ್, ಎಂಜೆಎಂ ಇಸ್ಲಾಮಾಬಾದ್ ಅಧ್ಯಕ್ಷ ಸಿದ್ದೀಕ್ ಬ್ರೈಟ್, ಬಿಜೆಎಂ ಅಧ್ಯಕ್ಷ ಮೂಸಾ ಕುಂಞಿ ಬಲಿಪಾಯ, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಶರೀಫ್ ಎಚ್.ಎ. ಭಾಗವಹಿಸಿದ್ದರು.

ಹಿದಾಯ ಫೌಂಡೇಶನ್ ನ ಬಶೀರ್ ಟಿ.ಕೆ., ಇಕ್ಬಾಲ್ ಫರಂಗಿಪೇಟೆ, ಹಕೀಂ ಕಲಾಯಿ, ಬಿ.ಎಂ.ತುಂಬೆ, ಬಶೀರ್ ವಗ್ಗ, ಸಾದಿಕ್ ಹಸ್ಸನ್, ಹಮೀದ್ ಗೋಳ್ತಮಜಲು, ರಶೀದ್ ಕಕ್ಕಿಂಜೆ, ಇಲ್ಯಾಸ್ ಕಕ್ಕಿಂಜೆ, ಸಿಬ್ಬಂದಿಯಾದ ವಾಸಿಫ್ ಅಲಿ, ಝಹೀರ್, ಇಬ್ರಾಹೀಂ ಇರ್ಫಾನ್ ಮತ್ತು ವಿಮೆನ್ಸ್ ವಿಂಗ್ ಸದಸ್ಯರು ಭಾಗವಹಿಸಿದರು.

517 ಮಂದಿ ಶಿಬಿರದ ಸದುಪಯೋಗ ಪಡೆದರು.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News