'ಕಂಕನಾಡಿ ಉಸ್ತಾದ್' ಇಸ್ಮಾಯೀಲ್ ಮುಸ್ಲಿಯಾರ್ ಮಿತ್ತೂರು ನಿಧನ
Update: 2024-03-08 04:39 GMT
ಬಂಟ್ವಾಳ, ಮಾ.8: ಕರ್ನಾಟಕ ರಾಜ್ಯ ಜಂ ಇಯ್ಯತುಲ್ ಉಲಮಾದ ಉಪಾಧ್ಯಕ್ಷ, 'ಕಂಕನಾಡಿ ಉಸ್ತಾದ್' ಎಂದೇ ಗುರುತಿಸಲ್ಪಡುತ್ತಿದ್ದ ಕೆ.ಎಂ.ಇಸ್ಮಾಯೀಲ್ ಮುಸ್ಲಿಯಾರ್ ಮಿತ್ತೂರು(76) ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ತಡರಾತ್ರಿ 2:30ರ ಸುಮಾರಿಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಕಲ್ಲಡ್ಕ, ಮಡಿಕೇರಿ ಸೇರಿದಂತೆ ವಿವಿಧ ಕಡೆ ಮಸೀದಿಗಳಲ್ಲಿ ಧಾರ್ಮಿಕ ಸೇವೆ ಸಲ್ಲಿಸಿದ್ದರು. ಮಂಗಳೂರಿನ ಕಂಕನಾಡಿಯಲ್ಲಿರುವ ರಹ್ಮಾನಿಯ ಜುಮಾ ಮಸೀದಿಯಲ್ಲಿ 30ಕ್ಕೂ ಅಧಿಕ ವರ್ಷ ಕಾಲ ಸೇವೆ ಸಲ್ಲಿಸಿ 'ಕಂಕನಾಡಿ ಉಸ್ತಾದ್' ಎಂದು ಜನಪ್ರಿಯರಾಗಿದ್ದರು.
ಮೃತರು ಪತ್ನಿ, ನಾಲ್ವರು ಪುತ್ರರು, ಐವರು ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.