ಕುದ್ರೋಳಿ: ಎಸ್ಕೆಎಸೆಸ್ಸೆಫ್‌ನಿಂದ ಬಾಲ್ಯೋತ್ಸವ ಕಾರ್ಯಕ್ರಮ
ಮಂಗಳೂರು, ಸೆ.11: ಎಸ್ಕೆಎಸೆಸ್ಸೆಫ್‌ನ 35ನೇ ವಾರ್ಷಿಕೋತ್ಸವದ ಪ್ರಯುಕ್ತ ಕೇಂದ್ರ ಸಮಿತಿಯ ನಿರ್ದೇಶನದಂತೆ ಮಕ್ಕಳ ಮನೋರಂಜನೆಗಾಗಿ ಬಾಲ್ಯೋತ್ಸವ ಕಾರ್ಯಕ್ರಮವು ರವಿವಾರ ಕುದ್ರೋಳಿ ಶಾಖೆಯಲ್ಲಿ ನಡೆಸಲಾಯಿತು.
ಅಲಿ ಫೈಝಿ ದುಆಗೈದರು. ನಡುಪಳ್ಳಿ ಮಸೀದಿಯ ಉಪಾಧ್ಯಕ್ಷ ಹಾಜಿ ಇಸ್ಮಾಯಿಲ್ ಡಿಲಕ್ಸ್ ಧ್ವಜಾರೋಹಣಗೈದರು. ಡ್ರಗ್ಸ್ ವಿರುದ್ಧ ಮಕ್ಕಳ ಸೈಕಲ್ ಜಾಥಾವನ್ನು ಶಾಖೆಯ ಅಧ್ಯಕ್ಷರಿಗೆ ಧ್ವಜ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಜಾಥಾವು ಕಂಡತ್‌ಪಳ್ಳಿ ಮಸೀದಿಯಿಂದ, ಮಂಡಿ, ಕುದ್ರೋಳಿ ಜಂಕ್ಷನ್, ಜಾಮಿಯಾ ಮಸೀದಿಯಾಗಿ ಮುಹಿಯುದ್ದೀನ್ ಮಸೀದಿಯ ಬಳಿ ಸಮಾಪನೆಗೊಂಡಿತು.
ನೂರುಲ್ ಉಲೂಂ ಮದ್ರಸ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಎಸ್ಕೆಎಸೆಸ್ಸಫ್ ಜಿಲ್ಲಾ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಭಾಗವಹಿಸಿದ್ದರು. ಶಾಖೆಯ ಅಧ್ಯಕ್ಷ ಬಿಎ ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿ ದ್ದರು. ಅತಿಥಿಯಾಗಿ ಕಾರ್ಪೋರೇಟರ್ ಹಾಜಿ ಶಂಸುದ್ದೀನ್ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ರಫೀಕ್ ಮುಸ್ಲಿಯಾರ್, ಸಿರಾಜ್ ಫೈಝಿ, ಮುಸ್ತಫ ದಾರಿಮಿ, ಶಾಹುಲ್ ಹಮೀದ್ ಉಸ್ತಾದ್, ಹಾರಿಸ್ ಕುದ್ರೋಳಿ, ಎನ್‌ಕೆ ಅಬೂಬಕ್ಕರ್, ಜಲೀಲ್ ಎಚ್‌ಎಸ್ ಉಪಸ್ತಿತರಿದ್ದರು.
ಶಾಖೆಯ ಕಾರ್ಯದರ್ಶಿ ಅಪ್ಸರ್ ಬಾಷಾ ಸ್ವಾಗತಿಸಿದರು. ಮುಹಮ್ಮದ್ ಶಾರಿಕ್ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಹಾಶಿಮ್ ವಂದಿಸಿದರು.