ಮಂಗಳೂರು | ನೀರು ಸರಬರಾಜು ಕೊಳವೆ ದುರಸ್ತಿ: ಪೂರೈಕೆಯಲ್ಲಿ ವ್ಯತ್ಯಯ

Update: 2024-08-15 09:37 GMT
ಸಾಂದರ್ಭಿಕ ಚಿತ್ರ (PTI)

ಮಂಗಳೂರು, ಆ.15: ಪಾಲಿಕೆಯ ನೀರು ಸರಬರಾಜು ವ್ಯವಸ್ಥೆ ತುಂಬೆಯ ರೇಚಕ ಸ್ಥಾವರದಿಂದ ಪಣಂಬೂರ್‌ಗೆ ಪಂಪಿಂಗ್ ಮಾಡುವ 900 ಎಂ.ಎಂ. ವ್ಯಾಸದ ಕೊಳವೆಯ ತುರ್ತು ದುರಸ್ತಿ ಕಾಮಗಾರಿ ಕಾರಣ ಆ. 16ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ ವಿವಿಧ ಕಡೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಪ್ರಕಟನೆ ತಿಳಿಸಿದೆ.

ಪಣಂಬೂರಿನ ಎಂಸಿಎಫ್ ರೈಲ್ವೇ ಗೇಟ್ ಬಳಿ ಪೈಪ್‌ಲೈನ್ ತುರ್ತು ದುರಸ್ತಿ ಕಾಮಗಾರಿಯ ಹಿನ್ನೆಲೆಯಲ್ಲಿ ಸುರತ್ಕಲ್, ಕಾಟಿಪಳ್ಳ, ಎನ್‌ಐಟಿಕೆ, ಎಂಸಿಎಫ್, ಕಾಪಿಕಾಡ್, ಕೂಳೂರು, ಜಲ್ಲಿಗುಡ್ಡೆ, ಕಾವೂರು ಭಾಗಶ, ಕೋಡಿಕಲ್ ಭಾಗಶ, ಪಚ್ಚನಾಡಿ, ಅಶೋಕನಗರ, ಮೂಡ ಪಂಪ್‌ಹೌಸ್, ದೇರೆಬೈಲ್, ಕುಳಾಯಿ, ಮುಕ್ಕ, ಪಣಂಬೂರು ಮೊದಲಾದ ಪ್ರದೇಶಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News