ಮಂಗಳೂರು: ಸಮಗ್ರ ಕಲಿಕೆಯಲ್ಲಿ ʼಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ʼ ಗೆ ಪ್ರಥಮ ರ‍್ಯಾಂಕ್

Update: 2024-01-12 07:27 GMT

ಮಂಗಳೂರು: Education Today ನಡೆಸಿರುವ ಸಮೀಕ್ಷೆಯಲ್ಲಿ ಸಿಬಿಎಸ್ಇ ಮಾಪನದ ಪ್ರಕಾರ, ಸಮಗ್ರ ಕಲಿಕೆಯಲ್ಲಿ ಇಡೀ ಭಾರತದಲ್ಲಿ ಪ್ರಥಮ‌ ರ‍್ಯಾಂಕ್ ಪಡೆಯುವ  ಮೂಲಕ ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ಅದ್ಭುತ ಸಾಧನೆ ಮಾಡಿದೆ.

ಈ ಕುರಿತು ಸಂತಸ ವ್ಯಕ್ತಪಡಿಸಿರುವ ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ಆಡಳಿತ ಮಂಡಳಿಯು, ಬದ್ಧತೆ, ಉತ್ಕೃಷ್ಟತೆ ಹಾಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮೂಲಕ ಶಾಲೆಯು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಆ ಮೂಲಕ ಉನ್ನತ ಶಿಕ್ಷಣ ಒದಗಿಸುವಲ್ಲಿ ತನ್ನದೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ ಎಂದು ಹೇಳಿದೆ.

ಬೆಂಗಳೂರಿನ ದ ತಾಜ್ ಹೋಟೆಲ್ ನಲ್ಲಿ ಡಿಸೆಂಬರ್ 11, 2023ರಂದು ನಡೆದ  ಸಮಾರಂಭದಲ್ಲಿ ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ಅಧ್ಯಕ್ಷ ಹೈದರ್ ಅಲಿ ಹಾಗೂ ಟ್ರಸ್ಟಿ ರಾಹಿಲ್ ಹೈದರ್ ಅವರಿಗೆ ʼಇಂಡಿಯಾ ಸ್ಕೂಲ್ ಮೆರಿಟ್ ಅವಾರ್ಡ್ಸ್ 2023ʼ ಅನ್ನು ಪ್ರದಾನ ಮಾಡಲಾಯಿತು.

ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ಸಮಗ್ರ ಕಲಿಕೆಯಲ್ಲಿ ಪ್ರಥಮ ಸ್ಥಾನಕ್ಕೆ ಪಾತ್ರವಾಗಿರುವುದು ಅದರ ರಾಜಿರಹಿತ ಶೈಕ್ಷಣಿಕ ಉತ್ಕೃಷ್ಟತೆಗೆ ಸಾಕ್ಷಿಯಾಗಿದೆ ಹಾಗೂ ಉತ್ತಮ ವ್ಯಕ್ತಿಗಳನ್ನು ರೂಪಿಸುವಲ್ಲಿ ಅದರ ಬದ್ಧತೆಯನ್ನು ತೋರಿಸುತ್ತದೆ ಎಂದು ಸಂಸ್ಥೆಯು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News