ಮೀಫ್ ಮೊಂಟೆಸ್ಸರಿ ಶಿಕ್ಷಕರ ಕಾರ್ಯಾಗಾರ ಉದ್ಘಾಟನೆ

Update: 2023-08-26 10:27 GMT

ಉಪ್ಪಿನಂಗಡಿ: ದ.ಕ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ(ಮೀಫ್) ಮತ್ತು ಯೆನಪೋಯ ಅಕ್ಷರ ಹೌಸ್ ಆಫ್ ಚಿಲ್ಡ್ರನ್ಸ್ ಇದರ ಸಹಬಾಗಿತ್ವದಲ್ಲಿ  ಎಲ್.ಕೆ.ಜಿ, ಯು.ಕೆ.ಜಿ ಶಿಕ್ಷಕರ ಏಕ ದಿನ ಕಾರ್ಯಾಗಾರ ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ಸಭಾಂಗಣದಲ್ಲಿ ಜರಗಿತು.

ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಬಿ.ಯಸ್ ರವಿಯವರು, ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಕ್ರಾಂತಿಕಾರಿ ಬದಲಾವಣೆಗೆ ಮುಂದಡಿ ಇಡುತ್ತಿದೆ. ದೇಶದ ಮುಖ್ಯವಾಹಿನಿಯಲ್ಲಿ ಸೇರಲು ಶಿಕ್ಷಣ ಬಹಳ ಪ್ರಾಮುಖ್ಯವಾದದು. ಶಿಕ್ಷಣದೊಂದಿಗೆ ಸಂಸ್ಕಾರ ಪಡೆದಾಗ ಡ್ರಗ್ಸ್, ಇನ್ನಿತರ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವುದು ಸಾಧ್ಯವಿಲ್ಲ ಎಂದರು.


ಅಧ್ಯಕ್ಷತೆಯನ್ನು ಮೀಫ್ ಅಧ್ಯಕ್ಷ ಮೂಸಬ್ಬ.ಪಿ. ಬ್ಯಾರಿ ವಹಿಸಿದ್ದರು.ಮೀಫ್ ಉಪಾಧ್ಯಕ್ಷ ಮುಸ್ತಫಾ ಸುಳ್ಯ ವಿಷಯ ಪ್ರಾಸ್ತಾವನೆಗೈದರು.ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ಅಧ್ಯಕ್ಷ ಹಾಜಿ.ಎಚ್.ಯೂಸುಫ್, ಸಂಚಾಲಕÀ ಶುಕೂರು ಹಾಜಿ,ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಟ್ಯಾಲೆಂಟ್, ಯೋಜನಾ ನಿರ್ದೆಶಕ ಶಾರಿಕ್ ಮಂಗಳೂರು ಕಾರ್ಯಕ್ರಮ ಸಂಯೋಜಕರುಗಳಾದ ಶೇಕ್ ರಹ್ಮತ್ತುಲ್ಲ, ಮನ್ ಶರ್ ವಿದ್ಯಾ ಸಂಸ್ಥೆಯ ಹೈದರ್ ವiರ್ದಾಳ ಇಂಡಿಯನ್ ಸ್ಕೂಲ್ ಮುಖ್ಯೋಪಾಧ್ಯಾಯಿನಿ ಸಂಶಾದ್ ಬೇಗಂ ಮೊದಲಾದವರು ಉಪಸ್ಥಿತರಿದ್ದರು.


ದ.ಕ ಮತ್ತು ಉಡುಪಿ ಜಿಲ್ಲೆಯಗಳಲ್ಲಿ ಮೊಂಟೆಸ್ಸರಿ ನರ್ಸರಿ ಶಿಕ್ಷಕರುಗಳಿಗೆ 3 ಕೇಂದ್ರಗಳಲ್ಲಿ ತರಬೇತಿ ನಡೆಯಲಿದ್ದು ಪ್ರಥಮ ತರಬೇತಿ ಕಾರ್ಯಗಾರ ಉಪ್ಪಿನಂಗಡಿಯಲ್ಲಿ ಉದ್ಘಾಟನೆ ಗೊಂಡಿರುತ್ತದೆ.ಮಂಗಳೂರಿನ ಯೆನೆಪೋಯ ಅಕ್ಷರ ಹೌಸ್ ಆಫ್ ಚಿಲ್ಡ್ರನ್ಸ್, ತರಬೇತಿ ಸಂಸ್ಥೆಯ ಫಾತಿಮಾ ಶಮಿನಾ ನೇತೃತ್ವದಲ್ಲಿ ದೀಪ್ತಿ,ಸ್ಮಿತಾ ,ಝೀನಾ ಇವರೊಂದಿಗೆ ತಂಡದ ಸದಸ್ಯರುಗಳು ಭಾಗವಹಿಸುತ್ತಿದ್ದು ಪ್ರಾತ್ಯಕ್ಷಿತೆಯೊಂದಿಗೆ, ಮಕ್ಕಳ ವ್ಯಕ್ತಿತ್ವ ವಿಕಸನ, ಪಠ್ಯ, ಪಠ್ಯೇತರ ಚಟುವಟಿಕೆ ಒತ್ತಡ ರಹಿತ ಶಿಕ್ಷಣ ಭಾಷಾ ಸಂಮೊಹನ ಮಾನಸಿಕ ಮತ್ತು ದೈಹಿಕ ಆರೋಗ್ಯ ವಿಷಯಗಳ ಬಗ್ಗೆ ಪರಿಣಾಮಕಾರಿ ತರಬೇತಿ ನೀಡಲಾಯಿತು ಕಾರ್ಯಗಾರದಲಿ ಮೀಫ್ ಪೂರ್ವ ವಿಭಾಗದ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಕಡಬ ಮತ್ತು ಸುಳ್ಯದ ಶಾಲೆಗಳಿಂದ ಸುಮಾರು 150ಕ್ಕೂ ಮಿಕ್ಕಿದ ಶಿಕ್ಷಕರುಗಳು ಮತ್ತು ಆಡಳಿತ ವರ್ಗದವರು ಭಾಗವಹಿಸಿದ್ದರು.









 


 


 


 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News