ಬ್ಯಾರಿ ಮಹನೀಯರ ಬಗ್ಗೆ ಮಾಹಿತಿ ನೀಡಲು ಮನವಿ

Update: 2024-11-05 13:25 GMT

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಕರ್ನಾಟಕ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಪ್ರಮುಖ ಬ್ಯಾರಿ ಮಹನೀಯರ ಬಗ್ಗೆ ಗ್ರಂಥ ಹೊರತರಲು ನಿರ್ಧರಿಸಿದೆ.

ಬ್ಯಾರಿ ಭಾಷೆ, ಕಲೆ, ಸಾಹಿತ್ಯ, ರಾಜಕೀಯ, ಸಾಮಾಜಿಕ, ಶಿಕ್ಷಣ, ಉದ್ಯಮ, ಸಾಹಿತ್ಯ-ಸಾಂಸ್ಕೃತಿಕ ಸಂಘಟಕರು ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ 60 ವರ್ಷ ಪ್ರಾಯ ಮೇಲ್ಪಟ್ಟ ಸಾಧಕ ಬ್ಯಾರಿ ಮಹನೀಯರ ಹೆಸರು ಮತ್ತು ಅದಕ್ಕೆ ಪೂರಕವಾಗಿ ಮಾಹಿತಿಯನ್ನು ಸಾಧಕರು ಅಥವಾ ಸಾರ್ವಜನಿಕರು ನೀಡಬಹುದಾಗಿದೆ.

ಮಹನೀಯರ ಸಾಧನೆಯನ್ನು ಆಧರಿಸಿ ಗ್ರಂಥದಲ್ಲಿ ಅವರ ಬಗ್ಗೆ ವಿವರ ದಾಖಲಿಸುವ ನಿರ್ಧಾರವು ಅಕಾಡಮಿಯದ್ದಾಗಿದೆ. ಈ ಗ್ರಂಥದ ಸಂಪಾದಕರಾಗಿ ಪತ್ರಕರ್ತ ಹಂಝ ಮಲಾರ್ ಅವರನ್ನು ನೇಮಿಸಲಾಗಿದೆ. ಹಾಗಾಗಿ ಬ್ಯಾರಿ ಮಹನೀಯರ ಬಗ್ಗೆ ವಿವರವನ್ನು ಗ್ರಂಥದ ಸಂಪಾದಕ ಹಂಝ ಮಲಾರ್ (ಮೊ.ಸಂ: 9481017495) ಅಥವಾ ಅಕಾಡಮಿ ಕಚೇರಿಯ ಇಮೇಲ್ bearyacademy@yahoo.in > ಅಥವಾ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಸಾಮರ್ಥ್ಯ ಸೌಧ, ಮಂಗಳೂರು ತಾಲೂಕು ಪಂಚಾಯತ್ ಹಳೇ ಕಟ್ಟಡ, 2ನೇ ಮಹಡಿ, ಮಿನಿ ವಿಧಾನಸೌಧದ ಬಳಿ, ಮಂಗಳೂರು 575001 ಈ ವಿಳಾಸಕ್ಕೆ ನವೆಂಬರ್ 25ರೊಳಗೆ ಕಳುಹಿಸಿಕೊಡಬಹುದು.

ಇದು ಮುಂದಿನ ಪೀಳಿಗೆಗೆ ಹಾಗೂ ಇತಿಹಾಸದಲ್ಲಿ ಅಚ್ಚೊತ್ತಿ ನಿಲ್ಲುವ ಬ್ಯಾರಿ ಮಹನೀಯರ ಕುರಿತಾಗಿರುವ ಐತಿಹಾಸಿಕ ಗ್ರಂಥವಾಗಿರುವುದರಿಂದ ಸಾರ್ವಜನಿಕರು ಈ ಯೋಜನೆಯಲ್ಲಿ ಕೈಜೋಡಿಸಬೇಕೆಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News