ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಮಸೂದ್ ಮನೆಗೆ ಸಚಿವರ ಭೇಟಿ
ಮಂಗಳೂರು, ಆ.6: ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್‌ರ ಮನೆಗೆ ರಾಜ್ಯ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಖಾತೆ ಸಚಿವ ಝಮೀರ್ ಅಹ್ಮದ್ ಖಾನ್ ಹಾಗೂ ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಬುಧವಾರ ಭೇಟಿ ನೀಡಿ ಹಜ್ ಭವನ ನಿರ್ಮಿಸುವ ಬಗ್ಗೆ ಹಾಗೂ ಪ್ರಸ್ತುತ ವಿದ್ಯಮಾನಗಳ ಕುರಿತು ಚರ್ಚಿಸಿದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ರಾಜೀವ್ ಗಾಂಧಿ ಆರೋಗ್ಯ ವಿವಿಯ ಸಿಂಡಿಕೇಟ್ ಸದಸ್ಯ ಡಾ. ಯು.ಟಿ. ಇಫ್ತಿಕಾರ್ ಅಲಿ, ಕಾಂಗ್ರೆಸ್ ಮುಖಂಡರಾದ ಇನಾಯತ್ ಅಲಿ, ಡಾ. ಕಣಚೂರು ಮೋನು ಹಾಜಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರಾದ ಹಾಜಿ ಸಿ. ಮಹಮೂದ್, ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಬಿ.ಎಂ. ಮುಮ್ತಾಝ್ ಅಲಿ, ಹಾಜಿ ಸೈಯ್ಯದ್ ಅಹ್ಮದ್ ಬಾಷಾ ತಂಳ್, ಕೆ. ಅಶ್ರಫ್, ಎಸ್.ಎಂ. ರಶೀದ್ ಹಾಜಿ, ಕಾರ್ಯದರ್ಶಿಗಳಾದ ಹಾಜಿ ಬಿ. ಅಬೂಬಕ್ಕರ್, ಹಾಜಿ ಅಬ್ದುಲ್ ಮಜೀದ್ ಸಿತಾರ್, ಎನ್.ಕೆ. ಅಬೂಬಕ್ಕರ್, ಹಾಜಿ ಬಿ.ಎಸ್ ಹುಸೈನ್ ಜೋಕಟ್ಟೆ, ಹಾಜಿ ಮೊಯಿದಿನ್ ಮೋನು, ಡಾ. ಆರೀಫ್ ಮಸೂದ್, ಅಬ್ಬಾಸ್ ಉಚ್ಚಿಲ್, ಹಾಜಿ ರಿಯಾಝುದ್ದೀನ್, ಯು.ಬಿ. ಸಲೀಂ, ಹಾಜಿ ಅಬ್ದುಲ್ ಮಜೀದ್ ಪಿ.ಪಿ, ಅಬೀದ್ ಜಲಿಹಾಲ್, ಹಾಜಿ ಮಕ್ಬೂಲ್ ಅಹ್ಮದ್ , ಹಾಜಿ ಎಸ್.ಎ. ಖಲೀಲ್ ಅಹ್ಮದ್, ಶಂಸುದ್ಧೀನ್ ಸುಳ್ಯ, ಮುಹಮ್ಮದ್ ಸಲೀಂ ಮನ್ನತ್, ಇಕ್ಬಾಲ್ ಮುಲ್ಕಿ , ನಾಸೀರ್ ಯಾದ್ಗಾರ್, ಬಿಲಾಲ್ ಮೊಹಿದ್ದೀನ್, ಕಾರ್ಪೊರೇಟರ್‌ಗಳಾದ ಹಾಜಿ ಶಂಸುದ್ಧೀನ್, ಅಬ್ದುಲ್ ಲತೀಫ್ ಕಂದಕ್, ಝೀನತ್ ಶಂಸುದ್ಧೀನ್ ಉಪಸ್ಥಿತರಿದ್ದರು.