ಮೂಡುಬಿದಿರೆ: ಮಿಥುನ್ ರೈ ಭಾವಚಿತ್ರವಿದ್ದ ಫ್ಲೆಕ್ಸ್ ಗೆ ಹಾನಿ

Update: 2024-03-09 07:13 GMT

ಮೂಡುಬಿದಿರೆ, ಮಾ.9: ಮೂಡುಬಿದಿರೆಯಲ್ಲಿ ಮಾ.10ರಂದು ನಡೆಯಲಿರುವ ಸರಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸ್ವಾಗತ ಕೋರಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ಮೂಡುಬಿದಿರೆ ಪರಿಸರದಲ್ಲಿ ಹಾಕಿದ ಫ್ಲೆಕ್ಸ್ ಅನ್ನು ಹಾನಿಗೊಳಿಸಿರುವ ಘಟನೆ ನಡೆದಿದೆ.

ಮೂಡುಬಿದಿರೆ ವಿದ್ಯಾಗಿರಿ ಬಳಿ ಹಾಕಲಾಗಿದ್ದ ಫ್ಲೆಕ್ಸ್ ನಲ್ಲಿ ಮಿಥುನ್ ರೈಯವರ ಭಾವಚಿತ್ರವಿದ್ದ ಭಾಗವನ್ನೇ ಹರಿದುಹಾಕಲಾಗಿದೆ.

ಈ ಬಗ್ಗೆ ಮೂಡುಬಿದಿರೆ ಠಾಣೆಗೆ ದೂರು ನೀಡಿರುವ ಕಾಂಗ್ರೆಸ್ ಮುಖಂಡರು ಫ್ಲೆಕ್ಸ್ ಹರಿದಿರುವ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಚಂದ್ರಹಾಸ ಸನಿಲ್, ಪುರಂದರ ದೇವಾಡಿಗ, ಸುರೇಶ್ ಪ್ರಭು, ಸುರೇಶ್ ಕೋಟ್ಯಾನ್, ಸತೀಶ್ ಅಮೀನ್, ಇರ್ಷಾದ್, ರಾಜೇಶ್ ಕಡಲಕೆರೆ, ಅಲ್ತಾಫ್, ಅರುಣ್ ಕುಮಾರ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News