ಮೂಡುಬಿದಿರೆ: ಹುಲಿವೇಷದಿಂದ ಸಂಗ್ರಹವಾದ ಹಣದಿಂದ ಮನೆ ನಿರ್ಮಾಣ

Update: 2023-10-21 17:25 GMT

ಮೂಡುಬಿದಿರೆ: ಕಳೆದ ಹಲವು ದಶಕಗಳಿಂದ ಮೂಡುಬಿದಿರೆ ಗಣೇಶೋತ್ಸವ ಸಂದರ್ಭ ವಿಶೇಷ ರೀತಿಯಲ್ಲಿ ಹುಲಿವೇಷ ಕುಣಿತ ಆಯೋಜನೆಯಿಂದ ಹೆಸರುವಾಸಿಯಾಗಿರುವ ಸರ್ವೋದಯ ಫ್ರೆಂಡ್ಸ್ ಬೆದ್ರ ಈ ವರ್ಷ ಹುಲಿವೇಷದಿಂದ ಸಂಗ್ರಹವಾದ ಹಣದಿಂದ ಮನೆಕಟ್ಟಿಕೊಟ್ಟಿದೆ.

ಪಡುಮಾರ್ನಾಡು ಗ್ರಾಮದಲ್ಲಿ ಬೀಡಿಕಟ್ಟುವ ಕಾಯಕ ಮಾಡುತ್ತಿರುವ ಸುಮ ಎಂಬವರು ತಂದೆ-ತಾಯಿ ಹಾಗೂ ಮಕ್ಕಳ ಜೊತೆ ಮಣ್ಣಿನ ಗೋಡೆ, ತಗಡುಶೀಟ್ ಹೊದಿಕೆ ಇರುವ ಮನೆಯಲ್ಲಿ ವಾಸವಾಗಿದ್ದರು. ತೀರ ನಾದುರಸ್ತಿಯಲ್ಲಿದ್ದ ಮನೆಯಲ್ಲಿ ಕುಟುಂಬ ಆತಂಕದಿಂದ ಬದುಕು ಸಾಗಿಸುತ್ತಿದ್ದರು. ಇವರ ಪರಿಸ್ಥಿತಿಯ ಕಂಡು ಅಂಗನವಾಡಿ ಕಾರ್ಯಕರ್ತೆ ಶಯಿನ್ ಅವರು ಸರ್ವೋದಯ ಫ್ರೆಂಡ್ಸ್ ಗಮನಕ್ಕೆ ತಂದಿದ್ದಾರೆ. ತಂಡದ ಅಧ್ಯಕ್ಷ ಗುರು ದೇವಾಡಿಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿವೇಷದಿಂದ ಸಂಗ್ರಹವಾದ ಹಣ ಹಾಗೂ ವೈಯಕ್ತಿಕ ಹಣವನ್ನು ಸೇರಿಸಿ ಸುಮಾರು 7 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಯನ್ನು ಕಟ್ಟಿಸಿಕೊಡಲಾಗಿದೆ. 700 ಚದರ ಅಡಿ ವಿಸ್ತೀರ್ಣ ಹೊಂದಿರುವ ಮನೆ ನಿರ್ಮಾಣಕ್ಕೆ ದಾನಿಗಳೂ ನೆರವು ನೀಡಿದ್ದಾರೆ.

ಸರ್ವೋದಯ ಫ್ರೆಂಡ್ಸ್ ಕಟ್ಟಿಕೊಟ್ಟಿರುವ ಮನೆಯ ಹಸ್ತಾಂತರ ಕಾರ್ಯಕ್ರಮ ರವಿವಾರ ಬೆಳಗ್ಗೆ 10.30ಕ್ಕೆ ಪಡುಮಾರ್ನಾಡು ಜಿ.ಕೆ ಗಾರ್ಡನ್ ಬಳಿ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News