ಮುಡಿಪು: ಕಾರುಣ್ಯ ಕೇಂದ್ರ, ಪೊಸಕುರಲ್ ಬಳಗದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮುಡಿಪು: ಆರೋಗ್ಯ ತಪಾಸಣಾ ಶಿಬಿರದಂತಹ ಕಾರ್ಯಕ್ರಮ ಉತ್ತಮ ಸಮಾಜ ಸೇವೆ ಆಗಿದೆ. ನಾವು ಇಂತಹ ಕಾರ್ಯಕ್ರಮವನ್ನು ನಿಸ್ವಾರ್ಥ ರೀತಿಯಲ್ಲಿ ನಡೆಸಬೇಕು.ಆರೋಗ್ಯದ ಮಹತ್ವ ಅರ್ಥ ಮಾಡಿಕೊಳ್ಳಬೇಕು ಎಂದು ಡಾ.ಮುಹಮ್ಮದ್ ಮುಬೀನ್ ಹೇಳಿದರು.
ಕಾರುಣ್ಯ ಕೇಂದ್ರ ಮುಡಿಪು, ಪೊಸಕುರಲ್ ಬಳಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಯೆನೆಪೋಯ ಆರ್ಯುವೇದಿಕ್ ಮೆಡಿಕಲ್ ಕಾಲೇಜು ನರಿಂಗಾನ ಇದರ ಸಹಯೋಗದೊಂದಿಗೆ ಮುಡಿಪು ಭಾರತಿ ಸ್ಕೂಲ್ ನಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಯೆನೆಪೋಯ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಇದರ ವೈದ್ಯಕೀಯ ಮುಖ್ಯಸ್ಥ ಡಾ.ಸುಭಾಷ್ ರೈ ಕೆ.ಎನ್.ಅವರು, 'ಸಮಾಜ ಸೇವೆ' ಪುಸ್ತಕ ಬಿಡುಗಡೆಗೊಳಿಸಿ ಆರೋಗ್ಯ ಮತ್ತು ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು.
ಭಾರತಿ ಸ್ಕೂಲ್ ನ ಕರೆಸ್ಪಾಂಡೆಂಟ್ ಸುಬ್ರಹ್ಮಣ್ಯ ಭಟ್ ,ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಆರೋಗ್ಯ ಶಿಬಿರದ ಮಹತ್ವ ವನ್ನು ವಿವರಿಸಿದರು.
ಕಾರ್ಯಕ್ರಮ ದಲ್ಲಿ ಯೆನೆಪೋಯ ವಿವಿ ಕೋಆರ್ಡಿನೇಟರ್ ಅಬ್ದುಲ್ ರಝಾಕ್, ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ, ಇಸ್ಹಾಕ್ ಕಲ್ಲಾಪು, ಭಾರತಿ ಸ್ಕೂಲ್ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಉಪಸ್ಥಿತರಿದ್ದರು.
ಕಾರುಣ್ಯ ಕೇಂದ್ರ ಮುಡಿಪುವಿನ ಸಂಚಾಲಕ ರಿಝ್ವಾನ್ ಅಝ್‌ಹರಿ ಸ್ವಾಗತಿಸಿದರು. ಸಲ್ಮಾನ್ ಕಾರ್ಯಕ್ರಮ ನಿರೂಪಿಸಿದರು. ಸಿದ್ದೀಕ್ ವಂದಿಸಿದರು.