ಶಾಂತಿನಗರ: ಮಸೀದಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ಎ. ಹನೀಫ್ ಅವರಿಗೆ ಗ್ರೀನ್ ಸ್ಟಾರ್ ಕ್ರಿಕೆಟರ್ಸ್ ವತಿಯಿಂದ ಅಭಿನಂದನೆ

Update: 2025-01-12 07:41 GMT

ಕಿನ್ನಿಗೋಳಿ: ಖಿಲ್‌ರಿಯಾ ಜುಮಾ ಮಸೀದಿ ಶಾಂತಿನಗರ ಇದರ ಆಡಳಿತ ಸಮಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ಎ. ಹನೀಫ್ ಅವರನ್ನು ಗ್ರೀನ್ ಸ್ಟಾರ್ ಕ್ರಿಕೆಟರ್ಸ್ ವತಿಯಿಂದ ಸಂಸ್ಥೆಯ ಕಚೇರಿ ವಠಾರದಲ್ಲಿ ರವಿವಾರ ಅಭಿನಂದಿಸಲಾಯಿತು.

ಈ ಸಂದರ್ಭ ಶ್ರೀಮೂಕಾಂಬಿಕಾ ದೇವಸ್ಥಾನ ಶಾಂತಿನಗರ ಇದರ ಧರ್ಮದರ್ಶಿ ವಿವೇಕಾನಂದ,‌ ಕಿನ್ನಿಗೋಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಜಿ ಟಿ.ಎಚ್. ಮಯ್ಯದ್ದಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಖಾದರ್, ಅಡ್ವಕೇಟ್ ಹೈದರ್ ಅಲಿ, ಗ್ರೀನ್ ಸ್ಟಾರ್ ಕ್ರಿಕೆಟರ್ಸ್ ಸದಸ್ಯರಾದ ಶಫೀಕ್, ಶಾಕೀರ್, ಸೈಫುದ್ದೀನ್, ಇರ್ಷಾದ್, ಅನೀಝ್, ಇಮ್ರಾನ್, ನಿಝಾರ್, ಹಾಫಿಲ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News