ಬಕ್ರೀದ್: ಕುರ್ಬಾನಿಗೆ ಸೂಕ್ತ ಬಂದೋಬಸ್ತ್ ಆಗ್ರಹಿಸಿ ದ.ಕ.ಡಿಸಿ, ಪೊಲೀಸ್ ಆಯುಕ್ತರಿಗೆ ಮನವಿ

Update: 2024-06-12 12:40 GMT

ಮಂಗಳೂರು:  ಜೂನ್ 17ರಂದು ಬಕ್ರೀದ್ ಆಚರಿಸಲಾಗುತ್ತಿದ್ದು, ಅಂದು ಹಾಗೂ ನಂತರದ ಮೂರು ದಿನಗಳವರೆಗೆ ಕುರ್ಬಾನಿ ಸಾಂಪ್ರದಾಯವಿದೆ. ಈ ಕಡ್ಡಾಯ ಧಾರ್ಮಿಕ ಕಾರ್ಯಕ್ಕೆ ಯಾವುದೇ ರೀತಿಯ ಅಡೆತಡೆಯಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಬೇಕೆಂದು ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯು ಜಿಲ್ಲಾಧಿಕಾರಿಯವರಿಗೆ, ಪೊಲೀಸ್ ಮಹಾನಿರ್ದೇಶಕರಿಗೆ, ಪೊಲೀಸ್ ಆಯುಕ್ತರಿಗೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದೆ.

ಅಧ್ಯಕ್ಷ ಅಲ್ ಹಾಜ್ ಕೆ. ಎಸ್. ಮುಹಮ್ಮದ್ ಮಸೂದ್ ಅವರ ನಿರ್ದೇಶನದಂತೆ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯು ನಿಯೋಗವು ಜಿಲ್ಲಾಧಿಕಾರಿಯವರಿಗೆ, ಪೊಲೀಸ್ ಮಹಾನಿರ್ದೇಶಕರಿಗೆ, ಪೊಲೀಸ್ ಆಯುಕ್ತರಿಗೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು

ನಿಯೋಗದಲ್ಲಿ ಉಪಾಧ್ಯಕ್ಷರುಗಳಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಕೆ.ಅಶ್ರಫ್ , ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕಾರ್ಯದರ್ಶಿ ಹಾಜಿ ಸಿ ಅಬೂಬಕರ್, ಬಿ.ಎಸ್. ಇಮ್ತಿಯಾಝ್, ಎಂ.ಎ. ಅಶ್ರಫ್ ಎಂ. ಅನ್ವರ್ ರೀಕೊ, ಹಾಜಿ ಬಿ ಅಬೂಬಕರ್, ಅಬ್ಬಾಸ್ ಉಚ್ಚಿಲ್ ಮೊದಲಾದವರು ಇದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News