ಯೆನೆಪೊಯ ಪರಿಗಣಿತ ವಿವಿಯಲ್ಲಿ ಪರಿಸರ ದಿನಾಚರಣೆ

Update: 2024-06-12 13:27 GMT

ಮಂಗಳೂರು: ಯೆನೆಪೊಯ ಪರಿಗಣಿತ ವಿವಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಮತ್ತು ಯೆನೆಪೋಯ ಸಂಶೋಧನಾ ಕೇಂದ್ರದ ಘಟಕದ ಆಶ್ರಯದಲ್ಲಿ ಜಾಗತಿಕ ತಾಪಮಾನ ಹೆಚ್ಚಳದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಮೂಲಕ ವಿಶ್ವ ಪರಿಸರ ದಿನವನ್ನು ಮಂಗಳವಾರ ಆಚರಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ಅವರು ಕಾಡು ಸಂರಕ್ಷಣೆಯ ಮಹತ್ವ,ನಮ್ಮ ಅರಣ್ಯ ಸಂಪತ್ತಿನ ಇಂದಿನ ಪರಿಸ್ಥಿತಿ, ಕಾಡು ನಾಶದಿಂದ ಹವಾಮಾನ ಬದಲಾವಣೆಗೆ ಬೀರುವ ಪ್ರಭಾವ ಮತ್ತು ಹೆಚ್ಚಿನ ಮರಗಳನ್ನು ನೆಡುವ ಅಗತ್ಯತೆಯನ್ನು ತಮ್ಮ ಉಪನ್ಯಾಸದಲ್ಲಿ ಹೇಳಿದರು.

ಎನ್‌ಎಸ್‌ಎಸ್ ಘಟಕದ ಸಂಯೋಜಕಿ ಹಾಗೂ ಎಕ್ಸ್ಟೆಂಶನ್ ಆ್ಯಂಡ್ ಔಟ್-ರೀಚ್ ನಿರ್ದೇಶನಾಲಯದ ನಿರ್ದೇಶಕಿ ಡಾ. ಅಶ್ವಿನಿ ಎಸ್ ಶೆಟ್ಟಿ, ಪರಿಸರ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ಭಾಗ್ಯ ಶರ್ಮಾ ಉಪಸ್ಥಿತರಿದ್ದರು.

ಯೆನೆಪೋಯ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ.ರೇಖಾ ಪಿ.ಡಿ. ವಿಶ್ವಪರಿಸರ ದಿನಾಚರಣೆಯ ಮಹತ್ವವನ್ನು ವಿವರಿಸಿದರು.

ಯುವ ಜನರಿಗೆ ಕಾಡು ಸಂರಕ್ಷಣೆಯ ಮಹತ್ವವನ್ನು ಅರಿವು ಮೂಡಿಸಲು ಇ-ಪೋಸ್ಟರ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಜನರಿಗೆ ಮರಗಳನ್ನು ನೆಡುವಂತೆ ಪ್ರೋತ್ಸಾಹಿಸುವ ಸಲುವಾಗಿ ವಿವಿಧ ತಳಿಯ ಸುಮಾರು 150 ಸಸಿಗಳು ಮತ್ತು ಸೀಡ್ ಬಾಲ್‌ಗಳನ್ನು ವಿತರಿಸಲಾಯಿತು.

ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ. ಅಸೀಫ್ ಹಮೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌ಎಸ್‌ಎಸ್ ಆಯೋಜನಾ ಸಮಿತಿಯ ಸ್ವಯಂಸೇವಕರಾದ ಮನ್ವಿತಾ ಕೆ ಸ್ವಾಗತಿಸಿದರು.

ಎನ್‌ಎಸ್‌ಎಸ್ ಆಯೋಜನಾ ಸಮಿತಿಯ ಸ್ವಯಂಸೇವಕರಾದ ಜೋಯಲ್, ರೋವಿನಾ, ಮನ್ವಿತಾ, ಅಮಿನಾ, ಶೇಷ, ಶ್ರೀಲಕ್ಷ್ಮೀ ಮತ್ತು ದೀಪಿಕಾ ಕಾರ್ಯಕ್ರಮ ಸಂಯೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News