ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಉಚಿತ ಆಯುರ್ವೇದ ಮೆಡಿಕಲ್ ಕ್ಯಾಂಪ್

Update: 2024-07-09 18:13 GMT

ಕಾಸರಗೋಡು: ಶ್ರೀ ಸತ್ಯಸಾಯಿ ಸೇವಾ ಬಳಗ ಪೆರ್ಲ ಇವರ ಸಹಭಾಗಿತ್ವದಲ್ಲಿ ಉಚಿತ ಆಯುರ್ವೇದ ಮೆಡಿಕಲ್ ಕ್ಯಾಂಪ್  ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಿತು.

ಡಾ ಕೃಷ್ಣ ಮೋಹನ ಪೆರ್ಲ, ಡಾ ಸತ್ಯನಾರಾಯಣ, ಸತ್ಯನಾರಾಯಣ ಹೆಗಡೆ, ವಾಸುದೇವ ಕಾರಂತ ಉಜಿರೆಕೆರೆ ಮುಂತಾದ ಗಣ್ಯರು ಶಿಬಿರವನ್ನು ಉದ್ಘಾಟಿಸಿದರು.

ಡಾ ಸತ್ಯನಾರಾಯಣ ಬಿ, ಪ್ರಶಾಂತಿ ಕ್ಲಿನಿಕ್, ಬಾಯಾರುಪದವು ಹಾಗೂ ಡಾ ಕೃಷ್ಣ ಮೋಹನ ಬಿ ಆರ್, ಚಿನ್ಮಯ ಕ್ಲಿನಿಕ್ ಪೆರ್ಲ, ಮುಂದಾಳತ್ವದಲ್ಲಿ ನಡೆದ ಶಿಬಿರದಲ್ಲಿ ಶ್ರೀ ಗೋಪಾಲಕೃಷ್ಣ ಫಾರ್ಮಸಿ ಕುಂಬ್ಳೆ; ಡಾ ರವಿನಾರಾಯಣ, ಸಂಜೀವಿನಿ ಕ್ಲಿನಿಕ್, ನೆಹರೂ ನಗರ, ಪುತ್ತೂರು; ಶ್ರೀ ಸದ್ಗುರು ಡಿಸ್ಟ್ರಿಬ್ಯೂಟರ್, ಸುಮತಿ ಕಾಂಪ್ಲೆಕ್ಸ್, ಕಬಕ; ಸೀ ಕೇಮ್ ಫಾರ್ಮಸಿ, ಬೆಂಗಳೂರು; ಹಾಗೂ ಶ್ರೀ ಕಿಶೋರ ಹೇರಳ ಉಡುವ ಸಹಕರಿಸಿದರು.

ಸತ್ಯಸಾಯಿ ಸೇವಾ ಬಳಗದವರು 2024ರಲ್ಲಿ ನಡೆಸಿದ 5 ನೇ ಶಿಬಿರವಿದು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಳೆದ ವರ್ಷ ಕೆಎಂಸಿಯ ಶಿಬಿರವನ್ನು ನಡೆಸಿತ್ತು. ಈ ವರ್ಷವೂ ಕೆಎಂಸಿಯ ವೈದ್ಯಕೀಯ ತಪಾಸಣಾ ಶಿಬಿರವು ನಡೆಯಲಿರುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ತಿಳಿಸಿದರು.

ಸಿರಿಬಾಗಿಲು ಪ್ರತಿಷ್ಠಾನವು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಸಮಾಜಕ್ಕೆ ಉಪಯುಕ್ತವಾಗುವ ಇಂತಹ ಶಿಬಿರಗಳನ್ನು ಆಯೋಜಿಸುತ್ತಿರುವುದು ಒಂದು ಉತ್ತಮ ಕಾರ್ಯ ಎಂಬುದಾಗಿ ಗಣ್ಯರು ಅಭಿಮತ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ  ಸಾಂಸ್ಕೃತಿಕ ಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆದ್ರಡ್ಕ ಒಕ್ಕೂಟದ ಸಭೆಯನ್ನೂ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News