ಮಾಂಡ್ ಸೊಭಾಣ್ ತಿಂಗಳ ವೇದಿಕೆ ಕಾರ್ಯಕ್ರಮ

Update: 2024-10-08 17:05 GMT

ಮಂಗಳೂರು: ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 274ನೇ ಕಾರ್ಯಕ್ರಮ ಅಂತರ್‌ರಾಷ್ಟ್ರೀಯ ಸಂಗೀತ ದಿವಸದ ಅಂಗವಾಗಿ ಸಂಗೀತ ಸಂಧಿ ಕಾರ್ಯಕ್ರಮ ಅ.6ರಂದು ಶಕ್ತಿನಗರದ ಕಲಾಂಗಣದಲ್ಲಿ ನೆರವೇರಿತು.

ಸಂಗೀತಗಾರ ರೋಶನ್ ಬೇಳ ಗಂಟೆ ಬಾರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಯೊಲಿನ್ ವಾದಕ ಹಾಗೂ ತರಬೇತುದಾರ ನಿರಂಜನ್ ಸುನಿಲ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು. ಮಾಂಡ್ ಸೊಭಾಣ್ ಖಜಾಂಚಿ ಎಲ್ರೊನ್ ರಾಡ್ರಿಗಸ್ ಸನ್ಮಾನ ಪತ್ರ ವಾಚಿಸಿದರು.

ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಪಿಂಟೊ, ಸುಮೇಳ್ ಕೋಶಾಧಿಕಾರಿ ಕ್ಲಾರಾ ಪಿಂಟೊ ಉಪಸ್ಥಿತರಿದ್ದರು.

ನಂತರ ಕೊಂಕಣಿ, ತುಳು, ಇಂಗ್ಲಿಷ್ , ಹಿಂದಿ, ಮಲಯಾಳಮ್, ಮಣಿಪುರಿ, ಸಿಂಹಳಿ, ಸ್ಪಾನಿಶ್ ಹೀಗೆ ಎಂಟು ಭಾಷೆಗಳ ಸುಮಧುರ ಹಾಡುಗಳನ್ನು 46 ಜನ ಗಾಯಕರು ಹಾಡಿ ಮನ ರಂಜಿಸಿದರು. ರೋಶನ್ ಕ್ರಾಸ್ತಾ, ಸಂಜಯ್ ರಾಡ್ರಿಗಸ್, ಸಂಜೀತ್ ರಾಡ್ರಿಗಸ್ ಮತ್ತು ಸ್ಟಾಲಿನ್ ಡಿಸೋಜ ಸಂಗೀತದಲ್ಲಿ ಸಹಕರಿಸಿದರು.

ಸುಮೇಳ್ ಸಂಯೋಜಿಕಿ ರೈನಾ ಸಿಕ್ವೇರಾ ಸ್ವಾಗತಿಸಿದರು. ಅನಿಲ್ ಡಿಕುನ್ಹಾ, ಅಜಯ್ ಡಿಸೋಜ ತಾಕೊಡೆ, ಡೊ ಝೀನಾ ಮೆಂಡೊನ್ಸಾ, ವಿಸ್ಮಯಾ ಲೋಬೊ ಇವರು ಸಂಗೀತ ಕಾರ್ಯಕ್ರಮವನ್ನು ಹಾಗೂ ಲವಿನಾ ದಾಂತಿ ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು.

ಸುಮೇಳ್ 2015 ರಲ್ಲಿ ಸ್ಥಾಪನೆಗೊಂಡ ಮಾಂಡ್ ಸೊಭಾಣ್ ಸಂಸ್ಥೆಯ ಗಾಯನ ತಂಡವಾಗಿದ್ದು, ಸಂಗೀತದ ವಿವಿಧ ಸ್ವರಗಳನ್ನು ಅಭ್ಯಾಸಿಸಿ, ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಡುಗಾರಿಕೆಯನ್ನು ಪ್ರಸ್ತುತಪಡಿಸುತ್ತಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ 60 ಜನ ಆಸಕ್ತರು ಕಲಿಯುತ್ತಿದ್ದಾರೆ.




 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News