ಬಿಎಸ್‌ಡಬ್ಲ್ಯುಟಿ ವತಿಯಿಂದ ಉಚಿತ ಹೊಲಿಗೆ ತರಬೇತಿ ಕೇಂದ್ರಗಳಿಗಾಗಿ ಅರ್ಜಿ ಆಹ್ವಾನ
ಮಂಗಳೂರು: ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಮಂಗಳೂರು ಇದರ ದಶಮಾನೋತ್ಸವದ ಪ್ರಯುಕ್ತ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಕೇಂದ್ರಗಳನ್ನು ಆರಂಭಿಸಲು ತೀರ್ಮಾನಿಸಲಾಗಿದ್ದು, ಆಸಕ್ತ ಗ್ರಾಪಂಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮೊದಲು ಆಗಮಿಸಿದ ಅರ್ಜಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಹೆಣ್ಣು ಮಕ್ಕಳ ಸ್ವಾವಲಂಬಿ ಬದುಕಿಗಾಗಿ ಆರಂಭಿಸಲಿ ರುವ ಹೊಲಿಗೆ ತರಬೇತಿ ಕೇಂದ್ರಕ್ಕೆ ಹನ್ನೊಂದು ಹೊಲಿಗೆ ಯಂತ್ರ ಮತ್ತು ತರಬೇತಿದಾರರ, ಸಹಾಯಕರ ವೇತನವನ್ನು ಹಾಗೂ ಕಟ್ಟಡದ ಬಾಡಿಗೆಯನ್ನು ಸಂಸ್ಥೆಯ ವತಿಯಿಂದ ಭರಿಸಲಾಗುವುದು. ಮೂರು ತಿಂಗಳ ಅವಧಿಯ ಈ ಕೋರ್ಸ್‌ನಲ್ಲಿ ಪ್ರತಿದಿನ ಮೂರು ಬ್ಯಾಚ್ ಇರುತ್ತದೆ.
ಹೊಲಿಗೆ ತರಬೇತಿಯಲ್ಲಿ ಪ್ರಥಮ ಅಂಕ ಪಡೆದ ಪ್ರತೀ ಬ್ಯಾಚ್‌ನ ಒಬ್ಬರಿಗೆ ಒಂದು ಹೊಲಿಗೆ ಯಂತ್ರ ಬಹುಮಾನವಾಗಿ ನೀಡಲಾಗುವುದು. ಮೆಚ್ಚುಗೆ ಗಳಿಸಿದ ಇತರ ಐದು ಜನರಿಗೆ ಪ್ರೋತ್ಸಾಹಧನ ಮತ್ತು ತರಬೇತಿ ಪಡೆದ ಎಲ್ಲರಿಗೆ ಸರ್ಟಿಫಿಕೇಟ್ ನೀಡಿ ಗೌರವಿಸಲಾಗುವುದು.
ಕಟ್ಟಡ ಸೌಕರ್ಯವಿರುವ ಪಂಚಾಯತ್‌ಗಳಿಗೆ ಶೀಘ್ರ ಅರ್ಜಿ ಸಲ್ಲಿಸಬಹುದು. ಪ್ರಸ್ತುತ ಮಂಗಳೂರು, ಉಳ್ಳಾಲ ತಾಲೂಕಿನ ಗ್ರಾಮ ಪಂಚಾಯಿತ್‌ಗಳಿಗೆ ಹೆಚ್ಚಿನ ಆದ್ಯತೆ. ನವೆಂಬರ್ 15ರ ಒಳಗಾಗಿ (ಈಮೇಲ್: bswtmangalore2015@gmail.com