ಮರಕಡ: ವ್ಯಕ್ತಿ ಆತ್ಮಹತ್ಯೆ

Update: 2024-11-09 15:01 GMT

ಮಂಗಳೂರು: ನಗರದ ಕುಂಜತ್ತಬೈಲ್ ಸಮೀಪದ ಮರಕಡ ಎಂಬಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೈದಿದ್ದು, ಆತ ಬರೆದಿಟ್ಟ ಡೆತ್‌ನೋಟ್ ಆಧಾರದಲ್ಲಿ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರದೀಪ್ ಕುಮಾರ್ ಹೊಟ್ಟಿ ಎಂಬವರು ತನ್ನ ಅಕ್ಕನ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆಕೊಂಡಿದ್ದಾರೆ. ಪ್ರದೀಪ್‌ರ ಮರಣೋತ್ತರ ಶವ ಪರೀಕ್ಷೆ ಬಳಿಕ ತನ ಊರಾದ ಬಾದಾಮಿ ತಾಲೂಕಿನ ಮುತ್ತಲಗೇರಿ ಗ್ರಾಮಕ್ಕೆ ಕೊಂಡೊಯ್ದು ಅಂತ್ಯ ಸಂಸ್ಕಾರ ನಡೆಸಲಾಗಿತ್ತು. ಇದಾದ ಬಳಿಕ ಮನೆಯನ್ನು ಸ್ವಚ್ಛಗೊಳಿಸುವಾಗ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ ತನ್ನ ಆತ್ಮಹತ್ಯೆಗೆ ಸಂಗುಚುಲಿ ಮತ್ತು ರಂಗನಾಥ ಎಂಬವರು ಕಾರಣ ಎಂದು ಪ್ರದೀಪ್ ಬರೆದಿದ್ದರು. ಈ ಬಗ್ಗೆ ಪ್ರದೀಪ್‌ರ ಅಣ್ಣಾ ಮಂಜುನಾಥ ಹೊಟ್ಟಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News