ಮಂಗಳೂರು: ವಾರಸುದಾರರಿದ್ದಲ್ಲಿ ಮಕ್ಕಳ ರಕ್ಷಣಾ ಘಟಕ ಸಂಪರ್ಕಿಸಲು ಮನವಿ
ಮಂಗಳೂರು,ನ.14: ನಗರದಲ್ಲಿದ್ದ ಕಾರುಣ್ಯ (8) ಮತ್ತು ವೈಷ್ಣವಿ (7) ಎಂಬಿಬ್ಬರು ಬಾಲಕಿಯರನ್ನು ಸಾರ್ವಜನಿಕರೊಬ್ಬರು 2021ರ ಡಿಸೆಂಬರ್ 29ರಂದು ಮಕ್ಕಳ ಕಲ್ಯಾಣ ಸಮಿತಿಗೆ ತಂದೊಪ್ಪಿಸಿದ್ದರು. ಪ್ರಸ್ತುತ ಈ ಬಾಲಕಿಯರು ಬಿಜೈ ಕಾಪಿಕಾಡ್‌ನ ಪ್ರಜ್ಞಾ ಚಿಣ್ಣರ ತಂಗುದಾಮಕ್ಕೆ ದಾಖಲಾಗಿದ್ದಾರೆ.
2024ರ ಫೆಬ್ರವರಿ 28ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂದೋಲ್ (15) ಎಂಬ ಬಾಲಕ ಪತ್ತೆಯಾಗಿದ್ದು, ನಗರದ ಬೊಂದೇಲ್‌ನಲ್ಲಿರುವ ಸರಕಾರಿ ಬಾಲಕರ ಬಾಲಮಂದಿರಕ್ಕೆ ದಾಖಲಿಸಲಾಗಿದೆ.
2022ರ ಅ.6ರಂದು ಸೋಮೇಶ್ವರ ಗ್ರಾಮದ ಜಾಯ್ ಲ್ಯಾಂಡ್ ರಸ್ತೆಯ ಗೇರು ಸಂಶೋಧನ ಕೇಂದ್ರದ ಬಳಿಯ ಲಕ್ಷ್ಮಿ ನಿವಾಸದ ಸಮೀಪ ನವಜಾತ ಶಿಶು ಪತ್ತೆಯಾಗಿತ್ತು. ಆ ಶಿಶುವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇಬ್ಬರು ಬಾಲಕಿಯರ ಮತ್ತು ಒಬ್ಬ ಬಾಲಕನ ವಾರಸುದಾರರು 120 ದಿನಗಳೊಳಗೆ ಮತ್ತು ನವಜಾತ ಶಿಶುವವಿನ ವಾರಸುದಾರರು 60 ದಿನಗಳೊಳಗೆ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಒಂದನೇ ಮಹಡಿ, ಜಿಲ್ಲಾಧಿಕಾರಿಗಳ ಕಚೇರಿ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು, ದೂ.ಸಂ 0824-2440004ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.