ಪಡ್ಪಿನಂಗಡಿ: ಕ್ಲಾಸಿಕ್ ಸ್ಪೋಟ್ಸ್ ಕ್ಲಬ್‌ನಿಂದ ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ
ಸುಳ್ಯ, ನ.17: ಕ್ಲಾಸಿಕ್ ಸ್ಪೋಟ್ಸ್ ಕ್ಲಬ್ ಮುಚ್ಚಿಲ ಇದರ ವತಿಯಿಂದ ಗ್ರಾಪಂ ಕಲ್ಮಡ್ಕ, ಕಲ್ಮಡ್ಕ ಕೃಷಿ ಪತ್ತಿನ ಸಹಕಾರಿ ಸಂಘ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಸುಳ್ಯ, ಲಯನ್ಸ್ ಕ್ಲಬ್ ಪಂಜ, ಎಂವೈಎಸ್ ಎಣ್ಮೂರು, ಯುನೈಟೆಡ್ ಯೂತ್ ಕೌನ್ಸಿಲ್ ನಿಂತಿಕಲ್ಲು, ರೆಕ್ಕ ಸ್ಪೋಟ್ಸ್ ಕ್ಲಬ್ ನಿಂತಿಕಲ್ಲು, ಬಿವೈಎ ಕರಿಂಬಿಲ, ಎಸ್‌ವೈಎಸ್ ಮುಚ್ಚಿಲ, ಎಸ್ಸೆಸ್ಸೆಫ್ ಎಣ್ಮೂರು, ಯುವ ಸ್ಫೂರ್ತಿ ಸೇವಾ ಸಂಘ ಕಲ್ಮಡ್ಕ, ಫ್ರೆಂಡ್ಸ್ ಸಮಹಾದಿ, ಫ್ರೆಂಡ್ಸ್ ಕ್ಲಬ್ ಕೂಡುರಸ್ತೆ ಕಾಣಿಯೂರು, ಬ್ಲಡ್ ಡೋನರ್ಸ್ ಮಂಗಳೂರು, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ದ.ಕ. ಜಿಲ್ಲೆ, ಸರಕಾರಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ, ಸನ್ಮಾನ ಸಮಾರಂಭ ಮತ್ತು ಮಾಹಿತಿ ಕಾರ್ಯಾಗಾರ ರವಿವಾರ ಪಡ್ಪಿನಂಗಡಿಯ ಶಿವಗೌರಿ ಕಲಾ ಮಂದಿರದಲ್ಲಿ ನಡೆಯಿತು.
ಶಿಬಿರವನ್ನು ಕಲ್ಮಡ್ಕ ಗ್ರಾಪಂ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಉದ್ಘಾಟಿಸಿದರು. ಕ್ಲಾಸಿಕ್ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಜಮಾಲ್ ಎಣ್ಮೂರು ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ರ‌್ಯಾಂಕ್ ವಿಜೇತ ಬಿಎಎಂಎಸ್ ವೈದ್ಯೆ ಡಾ.ಝಾಹಿದಾ ಯೂಸುಫ್ ಕೊಳ್ತಂಗರೆ ಮತ್ತು ನಿವೃತ ಸೈನಿಕ ಗಿರೀಶ್ ಎ.ಕೆ.ಅರ್ನೊಜಿಯವರನ್ನು ಕಲ್ಮಡ್ಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉದಯ ಕುಮಾರ್ ಬೆಟ್ಟ ಸನ್ಮಾನಿಸಿದರು. ಸುಳ್ಯ ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಸುಧಾಕರ ರೈ ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿ ಕೊಟ್ಟರು.
ಮುಖ್ಯ ಅತಿಥಿಗಳಾಗಿ ಪಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಕಾನತ್ತೂರು, ರಾಜ್ಯ ಪ್ರಶಸ್ತಿ ವಿಜೇತ ನಿವೃತ ಶಿಕ್ಷಕ ವಾಸುದೇವ ನಡ್ಕ, ಶಿವಗೌರಿ ಕಲಾಮಂದಿರದ ಮಾಲಕ ಸುರೇಶ್ ಕುಮಾರ್ ನಡ್ಕ, ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ ಸುಳ್ಯ ಇದರ ನಿರ್ದೇಶಕ ಇಸ್ಮಾಯೀಲ್ ಪಡ್ಪಿನಂಗಡಿ, ಪ್ರಗತಿಪರ ಕೃಷಿಕರಾದ ರಂಜಿತ್ ಭಟ್ ಪಂಜದ ಬೀಡು, ಅನ್ಸಾರ್ ಐವತ್ತೂಕ್ಲು, ಕಲ್ಮಡ್ಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಪ್ರಶಾಂತ್ ಜೆ., ಕಲ್ಮಡ್ಕ ಗ್ರಾಪಂ ಸದಸ್ಯ ಲೋಕೇಶ್ ಅಕ್ರಿಕಟ್ಟೆ, ಕೆಎಸ್‌ಟಿ ಕಾಣಿಯೂರು ಇದರ ಶಮೀರ್ ಎಣ್ಮೂರು, ದ.ಕ.ಜಿಪಂ ಹಿ.ಪ್ರಾ.ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶರೀಫ್ ಜಿ. ಎಣ್ಮೂರು, ಪಂಜ ಗ್ರಾಪಂ ಮಾಜಿ ಅಧ್ಯಕ್ಷ ರಫೀಕ್ ಸಿ.ಎಂ., ಕಲ್ಮಡ್ಕ ಗ್ರಾಪಂ ಮಾಜಿ ಅಧ್ಯಕ್ಷ ಹನೀಫ್ ಎಂ.ಕೆ., ಎಣ್ಮೂರು ಎಂವೈಎಸ್ ಮಾಜಿ ಅಧ್ಯಕ್ಷ ಹಮೀದ್ ಮರಕ್ಕಡ, ಹರೀಶ್ ಕುಮಾರ್ ಮುರುಳ್ಯ, ಸಮಾಹದಿ ಉಪಸ್ಥಿತರಿದ್ದರು.
ಮಾಜಿ ತಾಪಂ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ ಸ್ವಾಗತಿಸಿ, ವಂದಿಸಿದರು. ತೀರ್ಥನಂದ ಕೊಡಂಕೇರಿ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ 142 ಮಂದಿ ರಕ್ತದಾನ ಮಾಡಿದರು.